ಬೆಂಗಳೂರು : ಜನಪ್ರತಿನಿಧಿಗಳೇ ಇಲ್ಲದೆ ಒಂದು ಅವಧಿ ಪೂರೈಸು ತ್ತಿರುವ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ವರ್ಷಾರಂಭದ ಬಳಿಕ ಚುನಾವಣೆ ಯೋಗ ಕೂಡಿಬರುವ ಭರವಸೆ ಮೂಡಿದೆ. ಮುಂದಿನ ವರ್ಷ ಸ್ಥಳೀಯ ಚುನಾವಣೆ ಹಬ್ಬದ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ತಯಾರಿ ಶುರು ವಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು, 185 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸರಣಿಯಾಗಿ ಚುನಾವಣೆ ಪರ್ವ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಯಾವಾಗ ಚುನಾವಣೆ?
1). 8 ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ
2). ।ಏಪ್ರಿಲ್ನಲ್ಲಿ ತಾಪಂ, ಜಿಪಂ, ಪೌರಸಂಸ್ಥೆ ಎದುರಿಸುವ ಲೆಕ್ಕಾಚಾರ
. 3)ನೂತನ ಜಿಬಿಎ ಪಂಚ ಪಾಲಿಕೆಗಳ ಚೊಚ್ಚಲ ಚುನಾವಣೆ ಲಾಸ್ಟ್ ಆಪ್ಪನ್
ಸಕಾಲಕ್ಕೆ ಚುನಾವಣೆ ನಡೆಸಬೇಕಾದ ಸಂವಿಧಾನಿಕ ಹೊಣೆಗಾರಿಕೆ ನಡುವೆಯೂ ನಾನಾ ನೆಪ, ಅಡ್ಡಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುತ್ತಾ ಬಂದ ಕಾರಣ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ಆಕೆಯ ರಾಜ್ಯದಲ್ಲಿ ಸೊರಗಿದೆ. ಚುನಾವಣೆಯನ್ನು ಮತ್ತಷ್ಟು ಮುಂದೂಡಿಕೊಂಡು ಹೋಗುವುದು ಚುನಾಯಿತ ಸರಕಾರಕ್ಕೆ ಗೌರವ ತರುವುದಿಲ್ಲ ಎಂಬ ಚರ್ಚೆಗಳು ಆಡಳಿತಾರೂಢ ಕಾಂಗ್ರೆಸ್‌ನಲ್ಲಿಯೇ ಶುರು ವಾಗಿದ್ದು, ಚುನಾವಣೆ ನಡೆಸುವ ಒತ್ತಡ ಸೃಷ್ಟಿಯಾಗಿದೆ. ಅಂತೆಯೇ, ಚುನಾವಣೆಗೆ ಅಣಿಯಾಗಲು ಕಾಂಗ್ರೆಸ್ ನಿಂದ ಪಕ್ಷದ ಕೇಡರ್‌ಗೆ ಸಂದೇಶ ರವಾನೆಯಾಗಿದೆ. ಇದರ ಸುಳಮತು ಬಿಜೆಪಿ ಮತ್ತು ಜೆಡಿಎಸ್ ಸಹ ಸಿದ್ಧತೆ ಆರಂಭಿಸಿವೆ.

ಬ್ಯಾಲೆಟ್ ಬಳಕೆ : ರಾಜ್ಯ ಚುನಾವಣಾ ಆಯೋಗದ ಮೂಲಕ ನಡೆಯುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಇವಿಎಂ ಬದಲಿಗೆ ಮತ ಪತ್ರ (ಬ್ಯಾಲೆಟ್ ಪೇಪರ್ ) ಬಳಸಲು ಸರಕಾರ ತೀರ್ಮಾನಿಸಿದೆ. ಈ ಉದ್ದೇಶಕ್ಕಾಗಿ ಕಾನೂನು ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಬಯಸಿತ್ತು. ಆದರೆ, ಸದ್ಯದ ಕಾನೂನಿನಲ್ಲೇ ಇವಿಎಂ ಅಥವಾ ಬ್ಯಾಲೆಟ್ ಬಳಸಲು ಅವಕಾಶವಿದೆ ಎಂಬುದಾಗಿ ರಾಜ್ಯ ಚುನಾವಣಾ ಆಯೋಗದ ಸ್ಪಷ್ಟನೆ ನೀಡಿದೆ. ಮುಂಬರುವ ಜಿಪಂ, ತಾಪಂ, ಜಿಬಿಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮತ್ತೆ ಸಾಂಪ್ರದಾಯಕ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿವೆ.
ಕೋರ್ಟ್ ಪ್ರಕರಣಗಳು ಸೇರಿನಾನಾ ಕಾರಣಗಳನ್ನು ನೀಡಿ ಚುನಾವಣೆ ಮುಂದೂಡಿಕೊಂಡು ಬಂದಿರುವ ಸರಕಾರದ ನಿಲುವು ಈಗ ಬದಲಾಗಿದೆ. 2026ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಆಪೋಶನ ಮಾಡಿದ ಅಪಕೀರ್ತಿ ತಟ್ಟಲಿದೆ. ಹಾಗಾಗಿ, ರಾಜಕೀಯ ಪಕ್ಷಗಳ ಚಿನ್ನೆ ಹೊರತಾಗಿ ನಡೆಯುವ ಗ್ರಾಮ ಪಂಚಾಯಿತಿಗಳ ಚುನಾವಣೆ ಮೂಲಕ ನಾಡಿನ ಜನರ ನಾಡಿಮಿಡಿತ ಅರಿತು. ಉಳಿದ ಚುನಾವಣೆಗಳಿಗೆ ಅಣಿಯಾಗುವ ಚಿಂತನೆ ಸರಕಾರದಲ್ಲಿ ನಡೆದಿದೆ.
ಮೀಸಲು ಬಾಕಿ: ರಾಜ್ಯದ 239 ತಾಲೂಕು ಪಂಚಾಯಿತಿಗಳ 3,671 ಕ್ಷೇತ್ರಗಳು ಹಾಗೂ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 2020-21ನೇ ಸಾಲಿನಿಂದ ಚುನಾವಣೆ ಬಾಕಿ ಉಳದಿದೆ. ಜಿಪಂ ಮತ್ತು ತಾಪಂಗಳ ಕ್ಷೇತ್ರ ಪುನರ್ವಿಂಗಡಣೆಯನ್ನು ಸರಕಾರ ಒಪ್ಪಿದ್ದರೂ, ಮೀಸಲು ಅಂತಿಮಗೊಳಿಸಿ ಇನ್ನೂ ಚುನಾವಣಾ ಆಯೋಗಕ್ಕೆ ಕೊಟ್ಟಿಲ್ಲ. ಇದು ಕೋರ್ಟ್ ಅಂಗಳದಲ್ಲಿದ್ದು, ಬಹುತೇಕ ಐದು ವರ್ಷಗಳ ಒಂದು ಅವಧಿಯನ್ನು ಜನಪ್ರತಿನಿಧಿಗಳೇ ಇಲ್ಲದೆ ಜಿ.ಪಂ ಮತ್ತು ತಾ.ಪಂಗಳು ಸೊರಗಿವೆ.


