ಮಂಗಳೂರು: ಮಂಗಳೂರಿನ ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೆಜೈಂಟ್‌ನಲ್ಲಿ ವಿದ್ಯಾರ್ಥಿ ಪರಿಷತ್ 2025_26 ನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸಿಟ್ಯುಟ್ಸ್ಗಳ ನಿರ್ದೇಶಕರಾದ ರೆವರೆಂಡ್ ಫಾದರ್ ಪೌಸ್ಟಿನ್ ಲೂಕಸ್ ಲೋಬೊ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನಾಯಕತ್ವ ಎನ್ನುವುದು ಪ್ರತಿದಿನದ ಕಲಿಕೆ. ಕಲಿಯುವ ಮೂಲಕ ನಾವು ಬೆಳೆಯಬೇಕು ಮತ್ತು ವಿದ್ಯಾರ್ಥಿ ಸಮೂಹವನ್ನು ಬೆಳೆಸಬೇಕು’ ಎಂದರು.
ಅಭಿನೇತ್ರಿ ಜೆಸಿ ಸೌಜನ್ಯ ಹೆಗ್ಡೆ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿ ನಾಯಕನಾಗುವುದು ಎಂದರೆ, ಜವಬ್ದಾರಿಗಳ ನಾಯಕತ್ವ ವಹಿಸಿಕೊಳ್ಳುವುದು. ಸಮಸ್ಯೆಗಳು ಬಂದಾಗ, ಅದನ್ನು ಪರಿಹರಿಸುವ ಜವಬ್ದಾರಿ ನಾಯಕನದು. ಹಾಗಾಗಿಯೇ ವಿದ್ಯಾರ್ಥಿ ನಾಯಕರಲ್ಲಿ ಹದ್ದಿನ ಹಾಗೆ ಗುರಿ ತಲುಪುವ ನಿಷ್ಠೆ ಇರಬೇಕು ಎನ್ನುವ ಉತ್ತೇಜನದ ಮಾತುಗಳನ್ನಾಡಿದರು.
ವಿದ್ಯಾರ್ಥಿ ಪರಿಷತ್ 2025-26 ಉದ್ಘಾಟನೆಯ ಅಧ್ಯಕ್ಷತೆಯನ್ನು ಪಾದುವ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಅರುಣ್ ವಿಲ್ಸನ್ ಲೋಬೊ ವಹಿಸಿದ್ದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿದ ಸಂಯೋಜಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಬ್ದಾರಿ ತೆಗೆದುಕೊಳ್ಳುವ ಗುಣ ಬೆಳೆಸಿಕೊಳ್ಳುವ ಬಗ್ಗೆ ತಿಳಿಸಿದರು.
ಪಾದುವ ಕಾಲೇಜಿನ ಉಪಪ್ರಾಂಶುಪಾಲರಾದ ಹಾಗೂ ವಿದ್ಯಾರ್ಥಿ ಪರಿಷತ್ ಸಂಯೋಜಕರಾದ ಪ್ರೊ. ರೋಶನ್ ವಿನ್ನಿ ಸಾಂತುಮಯೋರ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಉಪಸಂಯೋಜಕರಾದ ಸೀಮಾ ಪಿರೇರ ಹಾಗೂ ಶ್ರೀಮತಿ ರೇಷ್ಮಾ ಡಿ ಸೋಜ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾದ ಕ್ರೈಡ್ ಪತ್ರಾವೋ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಧನುಷ್ ಹಾಗೂ ಜೋಯ್ದಿನ್ ಕಾರ್ಯಕ್ರಮ ನಿರ್ವಹಿಸಿದರು.