ಮಂಗಳೂರು ಓಂ ಶ್ರೀಮಠದಲ್ಲಿ ಫೆಬ್ರವರಿ 22ರಂದು ಆದಿತ್ಯವಾರ ಓಂ ಶ್ರೀ ಮಠ ಮಠಾಧಿಪತಿ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ ಅವರಿಂದ ಒಂದು ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಹಾಗೂ ಪಂಚಲಕ್ಷ ಶಿವಪಂಚಾಕ್ಷರಿ ಹವನ ಎಂಬ ಅತ್ಯಪೂರ್ವ ಅನುಷ್ಠಾನ ಸಾಧನಾ ತಪಸ್ಸು ಸಮರ್ಪಣ ಮಾಡಲಾಗಿದೆ.
2025 ಮಹಾಶಿವರಾತ್ರಿಯಂದು 1 ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಗುರುಗಳಿಂದ ಉಪದೇಶವನ್ನು ಸ್ವೀಕರಿಸಿ 2026 ಫೆಬ್ರವರಿ ಶಿವರಾತ್ರಿಯಂದು ಜಪವನ್ನಾ ಸಂಪೂರ್ಣಗೊಳಿಸಿ ಫೆಬ್ರವರಿ 18 ರಿಂದ ಗುರು ಉಪದೇಶದಂತೆ ಪಂಚ ದಿನ ಪಂಚಾಕ್ಷರಿ ಪಂಚಲಕ್ಷ ಹವನವನ್ನು ನಡೆಸಲು ಅನುಮತಿ ಪಡೆದು 22ರಂದು ಸಂಧ್ಯಾ ವೇಳೆ ವ್ಯತ್ಯಾಸ ಪರಂಪರೆಯ ಶ್ರೇಷ್ಠ ಯತಿವರ್ಯರ ಸಾನಿಧ್ಯದಲ್ಲಿ ಈ ಮಹತ್ ಕಾರ್ಯದ ಪೂರ್ಣಾಹುತಿಯೊಂದಿಗೆ ಸಮಪ್ತಗೊಳಿಸಲಾಯಿತು. ಫೆಬ್ರವರಿ 20 ರಂದು ಭರತನಾಟ್ಯ ಸಾಧನೆಗೆ ಗೋಲ್ಡನ್ ಬುಕ್ ಆಫ್ ವೆಲ್ಡ್ ರೆಕಾರ್ಡ್ 170 ಗಂಟೆಗಳ ಕಾಲ ನಿರಂತರ ನೃತ್ಯವಾಡಿದ ಕುಮಾರಿ ರೆಮೋನ ಪಿರೇರಾ ಅವರಿಂದ ಶಿವ ನೃತ್ಯವನ್ನಾ ಸಮರ್ಪಸಲಾಯಿತು.
ಸಮಾರೋಪ ಸಮರ್ಪಣ ವೇಳೆ ಶ್ರೀ ಮಹಾ ತಪಸ್ವಿ ಮಹಾ ಸಂಸ್ಥಾನದ 27 ಶಾಖಾಮಠದ ಗುರುಗಳಾದ ಪರಂಪೂಜ್ಯಯ ಶ್ರೀ ಅವಧೂತ ಕವಿ ಗುರುರಾಜ ಗುರೂಜಿ ಅವರಿಂದ “ಶಿವಜ್ಞಾನ ಯಜ್ಞ ಮಹೇಶ್ವರಿ”ಎಂಬ ಸನ್ಮಾನ ಅಭಿನಂದನಾ ಪುರಸ್ಕಾರ ಪತ್ರವನ್ನು ಮಾತಾಶ್ರೀ ಅವರಿಗೆ ನೀಡಿ ಗೌರವಿಸಿದರು.
ಈ ವೇಳೆ ಶ್ರೀ ಚಾಮುಂಡೇಶ್ವರಿ ಕಣಿಯೂರು ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಅಖಂಡ ಭಾರತ ಸನಾತನ ಸಂತ ಸಮಿತಿ ಕೋಶಾಧಿಕಾರಿ, ಶ್ರೀ ರಾಜೇಶ್ ನಾಥ ಸ್ವಾಮೀಜಿ, ಶ್ರೀ ಮಂಜುನಾಥ ಕ್ಷೇತ್ರ ಅರಸುಕುಪ್ಪೆ ಕೊಡಗು ಅಖಂಡ ಭಾರತ ಸನಾತನ ಸಂತ ಸಮಿತಿ ಉಪಾಧ್ಯಕ್ಷ, ಪರಂಪೂಜ್ಯಯ ಅವಧೂತ ಕವಿ ಗುರುರಾಜ ಗುರೂಜಿ ಅಖಂಡ ಭಾರತ ಸನಾತನ ಸಮಿತಿ ರಾಷ್ಟ್ರ ಮುಖ್ಯ ಕಾರ್ಯದರ್ಶಿ ಹಾಗೂ ಮಂಗಳೂರು ನಾರ್ತ್ ಶಾಸಕರು ಶ್ರೀ ಭರತ್ ಶೆಟ್ಟಿ, ಗುರುನಗರ ಕಾರ್ಪೊರೇಟರ್ ಶ್ರೀ ಜಯಾನಂದ, ಬಿಜೆಪಿ ಪ್ರಾಂತ ಸೇವಾ ಪ್ರಮುಖ ಗೋಪಾಲ್ ಕುತ್ತಾರ್, ಬಜರಂಗದಳ ಯುವ ಮೋರ್ಚಾ ಕಾರ್ಯಕರ್ತರು, ಉಪಸ್ಥಿತರಿದ್ದರು
ಓಂ ಶ್ರೀ ಮಠದ ಓಂ ಶ್ರೀ ಮಾತೃಶಕ್ತಿಯಿಂದ ವನಿತಾ ಕೋಟ್ಯಾನ್, ಲಲಿತಾ ಪದ್ಮಿನಿ, ಆಶಾ ಜಗದೀಶ್, ಪುಷ್ಪ, ಹರಿಣಾಕ್ಷಿ, ಹಿಂದೂ ಸಂಘಟನಾ ಕಾರ್ಯಕರ್ತರಾದ ಉಮೇಶ್ ಸುರತ್ಕಲ್ ಹಾಗೂ ಓಂ ಶ್ರೀ ಮಠದ ಶಿಷ್ಯ ವರ್ಗ ಅನೇಕ ಭಕ್ತಾದಿಗಳು ಪಾಲ್ಗೊಂಡರು.

