• Home  
  • ಎ.15ರಂದು ಮಂಗಳೂರಿನ ಹಲವೆಡೆ ವಿದ್ಯುತ್ ನಿಲುಗಡೆ
- DAKSHINA KANNADA - HOME - LATEST NEWS

ಎ.15ರಂದು ಮಂಗಳೂರಿನ ಹಲವೆಡೆ ವಿದ್ಯುತ್ ನಿಲುಗಡೆ

ಮಂಗಳೂರು: ನಗರದ ಅತ್ತಾವರ ಉಪಕೇಂದ್ರದಿಂದ ಹೊರಡುವ ಎವರಿ ಜಂಕ್ಷನ್ ಫೀಡರ್ ವ್ಯಾಪ್ತಿಯಲ್ಲಿ ಎ.15ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.

ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಫೀಡರ್‌ನಲ್ಲಿ ಮಾದರಿ ಉಪವಿಭಾಗದ ಯೋಜನೆಯಡಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಹಾಗಾಗಿ ಬಲ್ಮಠ ನ್ಯೂರೋಡ್, ಸ್ಟರಕ್ ರೋಡ್, ಮೋತಿಮಹಲ್, ಎವರಿ ಜಂಕ್ಷನ್, ಅಥೆನಾ ಹಾಸ್ಪಿಟಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಉರ್ವಮಾರ್ಕೆಟ್, ಹೊಯ್ಗೆಬೈಲ್ ನಗರದ ಉರ್ವಮಾರ್ಕೆಟ್ ಉಪಕೇಂದ್ರದಿಂದ ಹೊರಡುವ ಹೊಯ್ಗೆಬೈಲ್ ಫೀಡರ್ ವ್ಯಾಪ್ತಿಯಲ್ಲಿ ಎ.15 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.

ಅಂದು  ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಫೀಡರ್‌ನಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ನಡೆಯಲಿದೆ. ಹಾಗಾಗಿ ಉರ್ವಮಾರಿಗುಡಿ ಟೆಂಪಲ್ ರಸ್ತೆ, ಯಶಸ್ವಿನಗರ, ಮಲರಾಯ ಲೇಔಟ್, ಅನ್ವಿತ್ ಅಪಾರ್ಟ್‌ಮೆಂಟ್, ಜೇಷ್ಟವುಡ್, ಗೋಕುಲ್‌ಹಾಲ್, ಅಶೋಕನಗರ ಜಂಕ್ಷನ್, ಸೈಂಟ್ ಆಂಟೋನಿ ಕಾಲನಿ ರಸ್ತೆ, ಕನೋಪಿ ಅಪಾರ್ಟ್‌ಮೆಂಟ್, ಬಾಪುಜಿ ನಗರ, ಸುಂಕದಕಟ್ಟೆ, ಕವಿತಾ ರೆಸಿಡೆನ್ಸಿ, ರಘು ಬಿಲ್ಡಿಂಗ್ ರೋಡ್, ಕುಕ್ಕಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಅಡ್ಯಾರ್-ಕಣ್ಣೂರುನಗರದ ಕುಲಶೇಖರ ಉಪಕೇಂದ್ರದಿಂದ ಹೊರಡುವ ಅಡ್ಯಾರ್ ಫೀಡರ್ ಮತ್ತು  ಕಣ್ಣೂರು ಫೀಡರ್ ಫೀಡರ್  ವ್ಯಾಪ್ತಿಯಲ್ಲಿ ಎ.15ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಫೀಡರ್‌ಗಳಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ನಡೆಯಲಿದೆ. ಹಾಗಾಗಿ ಅಡ್ಯಾರ್, ಅಡ್ಯಾರ್‌ಕಟ್ಟೆ, ಅಡ್ಯಾರ್‌ಪದವು, ವಳಚ್ಚಿಲ್, ವಳಚ್ಚಿಲ್ ಪದವು, ಅರ್ಕುಳ, ಮೇರೆಮಜಲು, ಮೇರ್ಲಪದವು, ತುಪ್ಪೆಕಲ್ಲು, ಬಲ್ಲೂರು, ಕೊಡಕ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.  ಮೂಡುಬಿದಿರೆ-ಗಂಟಾಲ್ ಕಟ್ಟೆ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೋಟೆಬಾಗಿಲು, ಮೂಡುಬಿದಿರೆ, ಗಾಂಧಿನಗರ, ಗಂಟಾಲಕಟ್ಟೆ, ಇರುವೈಲು, ಪುಚ್ಚೆಮೊಗರು, ಹೌದಾಲ್, ನಿಡ್ಡೋಡಿ ಹಾಗೂ ತೋಡಾರ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಎ.15ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.  ಅಂದು ಬೆಳಗ್ಗೆ 9:30ರಿಂದ ಸಂಜೆ 6ರವರೆಗೆ ಈ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯ ಲಿದೆ. ಹಾಗಾಗಿ  ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ, ಕಾಡದಬೆಟ್ಟು, ಮಹಾವೀರ ಕಾಲೇಜ್, ವಿವೇಕಾನಂದ ನಗರ, ಸ್ವರಾಜ್ ಮೈದಾನ, ಒಂಟಿಕಟ್ಟೆ, ಕಡಲಕೆರೆ, ಪಿಲಿಪಂಜರ, ನಾಗರ ಕಟ್ಟೆ, ಅರಮನೆ ಬಾಗಿಲು, ಜ್ಯೋತಿನಗರ, ಅಲಂಗಾರು, ಜೈನ್‌ಪೇಟೆ, ಕೋಟೆಬಾಗಿಲು, ಸುಭಾಷ್‌ನಗರ, ಮರಿಯಾಡಿ, ಲಾಡಿ, ಪ್ರಾಂತ್ಯ, ಪೇಪರ್‌ಮಿಲ್, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಹೊಸಂಗಡಿ, ನೆತ್ತೋಡಿ, ಕೋಟೆಬಾಗಿಲು ದ್ವಾರ, ಕಲ್ಯಾಣಿ ಕೆರೆ, ಮಾರೂರು ಹೊಸಂಗಡಿ, ಶೇಡಿಗುರಿ, ಇರುವೈಲು, ಹೊಸ್ಮಾರ್‌ಪದವು, ಕೊನ್ನೆಪದವು, ಮಹಾವೀರ ಕಾಲೇಜ್ ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಮಾರ್ಪಾಡಿ, ಹೌದಾಲ್, ಮೂಡುಕೊಣಾಜೆ, ಪಡುಕೊಣಾಜೆ, ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಬೋಂಟ್ರಡ್ಕೆ, ಸ್ತುತಿಲಪದವು, ಅಶ್ವಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್‌ಮುಗೇರು ಚಕ್ಕುಪಾದೆ, ಕೊಪ್ಪಳ, ಕಳಕಬೈಲು, ಪುತ್ತಿಗೆಪದವು, ಹಂಡೇಲು, ತೋಡಾರು ಪಡೀಲು, ಪುದ್ದರಕೋಡಿ, ತೋಡಾರ್ ಪಲ್ಕೆ, ಮಿಜಾರ್, ಮೈಟ, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678