• Home  
  • ಪೋಪ್‌ ಆಸೆಯಂತೆ ನೆಚ್ಚಿನ ಸ್ಥಳದಲ್ಲಿ ಅಂತ್ಯಕ್ರಿಯೆ…!
- COMMUNITY NEWS - HOME - INETRNATIONAL - LATEST NEWS

ಪೋಪ್‌ ಆಸೆಯಂತೆ ನೆಚ್ಚಿನ ಸ್ಥಳದಲ್ಲಿ ಅಂತ್ಯಕ್ರಿಯೆ…!

ರೋಮ್‌: ಫ್ರಾನ್ಸಿಸ್‌ ಅವರು ಪೋಪ್‌ ಆಗಿ ಆಯ್ಕೆಯಾದಾಗಿನಿಂದಲೂ ಸರಳ ಜೀವನ ನಡೆಸಿದ್ದರು. ತಮ್ಮ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಸರಳವಾಗಬೇಕು ಎಂದು ಅವರು ಬಯಸಿದ್ದರು. ಇದಕ್ಕಾಗಿ 2024ರ ಏಪ್ರಿಲ್‌ನಲ್ಲಿ ಹೊಸ ನಿಯಮಗಳನ್ನು ರೂಪಿಸಿದ್ದ ಅವರು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಅಂತ್ಯಗೊಳಿಸಿದ್ದರು. ಅವುಗಳಲ್ಲಿ ಪ್ರಮುಖವು ಇಂತಿವೆ

photo credit apnews

100 ವರ್ಷದ ನಂತರ ವ್ಯಾಟಿಕನ್‌ ಹೊರಗೆ ಅಂತ್ಯಕ್ರಿಯೆ

ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೋಪ್ ಅವರ ಆಸೆಯಂತೆಯೇ ಸರಳೀಕರಣ ಗೊಳಿಸ ಲಾಗಿದೆ. ಅದರಂತೆ ವ್ಯಾಟಿಕನ್ ನಗರದಲ್ಲಿರುವ ಸಂತ ಪೀಟರ್ ಬೆಸಿಲಿಕಾದಲ್ಲಿ ಮೊದಲಿಗೆ ಪವಿತ್ರ ಪೂಜಾ ಕಾರ್ಯಗಳನ್ನು ಮುಗಿಸಿ, ಬಳಿಕ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಇದಾದ ಬಳಿಕ ಶರೀರವನ್ನು ವ್ಯಾಟಿಕನ್ ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಸಂತ ಮೇರಿ ಬೆಸಿಲಿಕಾದಲ್ಲಿ ಹೂಳಲಾಗುತ್ತದೆ.

100 ವರ್ಷದ ಬಳಿಕ ಪೋಪ್‌ ಒಬ್ಬರ ಅಂತ್ಯಸಂಸ್ಕಾರವನ್ನು ವ್ಯಾಟಿಕನ್ ನಗರದ ಹೊರಗೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಪೋಪ್‌ಗಳ ಅಂತ್ಯಸಂಸ್ಕಾರವನ್ನು ವ್ಯಾಟಿಕನ್ನ ಸೈಂಟ್ ಪೀಟರ್ಸ್ ಬೆಸಿಲಿಕಾದಲ್ಲೇ ನಡೆಸಲಾಗುತ್ತದೆ.

ಆದರೆ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರವನ್ನು ಅವರ ಇಚ್ಛೆಯಂತೆ, ಅವರ ನೆಚ್ಚಿನ ಊರಲ್ಲೇ ಮಾಡಲಾಗುತ್ತದೆ. ಬಿಡುವಿನ ಸಮಯದಲ್ಲಿ ಈ ಬೆಸಿಲಿಕಾದಲ್ಲಿ ಪೋಪ್ ಸಮಯ ಕಳೆಯುತ್ತಿದ್ದರು.

ಪಾರ್ಥಿವ ಶರೀರ ಎತ್ತರದ ಬದಲು ಕೆಳಗೆ ಇಡಲಾಗುತ್ತದೆ

ಇನ್ನು ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನೂ ಸರಳವಾಗಿ ನಡೆಸುವಂತೆ ಪೋಪ್ ಆಶಿಸಿದ್ದರು. ಹೀಗಾಗಿ ಅಂತಿಮ ದರ್ಶನಕ್ಕಾಗಿ ಸಂತ ಪೀಟರ್ ಬೆಸಿಲಿಕಾದಲ್ಲಿ ಅವರ ಪಾರ್ಥಿವ ಶರೀರವನ್ನು ಅತ್ಯಂತ ಎತ್ತರದ ವೇದಿಕೆಯ ಮೇಲೆ ಇಡುವುದರ ಬದಲು ಕೆಳಗೆ ಇಡಲಾಗುತ್ತದೆ. ತೆರೆದ ಶವಪಟ್ಟಿಯ ಬಳಿ ಬಂದು ಜನರು ಅಂತಿಮ ದರ್ಶನ ಪಡೆಯಲಿದ್ದಾರೆ.

ಒಂದೇ ಶವಪೆಟ್ಟಿಗೆ ಬಳಕೆ

ಪೋಪ್ ಫ್ರಾನ್ಸಿನ್ ಅವರ ಬಯಕೆಯಂತೆ ಮರ ಹಾಗೂ ಸತುವಿನಿಂದ ಮಾಡಲಾದ ಒಂದೇ ಶವಪೆಟ್ಟಿಗೆಯಲ್ಲಿಟ್ಟು ಹೂಳಲಾಗುತ್ತದೆ. ಹಿಂದಿನ ಪೋಪ್ಗಳನ್ನು ಸೈಪ್ರಸ್ ಮರದಿಂದ ಮಾಡಲಾದ ಶವಪೆಟ್ಟಿಗೆಯಲ್ಲಿಟ್ಟು, ಬಳಿಕ ಅದನ್ನು ಸೀಸದಿಂದ ಮಾಡಿದ ಪೆಟ್ಟಿಗೆಯೊಳಗಿಟ್ಟು, ಈ ಪೆಟ್ಟಿಗೆಯನ್ನು ಓಕ್ನಿಂದ ಮಾಡಿದ ಶವಪೆಟ್ಟಿಗೆಯೊಳಗಿಟ್ಟು ಹೂಳಲಾಗುತ್ತಿತ್ತು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678