• Home  
  • ಮುಂದಿನ ಪೋಪ್ ಯಾರು? ಪೋಪ್ ಫ್ರಾನ್ಸಿಸ್‌ ಉತ್ತರಾಧಿಕಾರಿ ಆಯ್ಕೆ ಹೇಗೆ?
- COMMUNITY NEWS - INETRNATIONAL - LATEST NEWS

ಮುಂದಿನ ಪೋಪ್ ಯಾರು? ಪೋಪ್ ಫ್ರಾನ್ಸಿಸ್‌ ಉತ್ತರಾಧಿಕಾರಿ ಆಯ್ಕೆ ಹೇಗೆ?

ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ವ್ಯಾಟಿಕನ್‌ನಲ್ಲಿ ಸಿದ್ದತೆ ನಡೆದಿದೆ. ಈ ನಡುವೆ, ಮುಂದಿನ ಪೋಪ್ ಯಾರು? ಎಂಬ ಕುತೂಹಲ ಹೆಚ್ಚಾಗಿದೆ. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಗಳ ಆಯ್ಕೆ ನಡೆಯುವುದು ಹೇಗೆಂಬ ಪ್ರಶ್ನೆಯೂ ಕಾಡುವುದು ಸಹಜ. ಸಾಮಾನ್ಯವಾಗಿ ಹೊಸ ಪೋಪ್ ಅನ್ನು ಈಗ ಆಯ್ಕೆ ಮಾಡುವ ಕೆಲಸ. ಪೋಪ್ ಮರಣದ ನಂತರ 15 ರಿಂದ 20 ದಿನಗಳ ನಡುವೆ ಕಂಟ್ರೋವ್ ಎಂದು ಹೆಸರಿಸಲಾದ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಯುತ್ತದೆ.

ಮುಂದಿನ ಪೋಪ್ ಯಾರು, ರೇಸ್‌ನಲ್ಲಿರುವ 5 ಕಾರ್ಡಿನಲ್‌ಗಳು ಯಾರು
ಅನೇಕ ಹಿರಿಯ ಕಾರ್ಡಿನಲ್‌ಗಳ ಪೈಕಿ ಯಾರು ಮುಂದಿನ ಪೋಪ್ ಆಗಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ವ್ಯಾಟಿಕನ್ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರು ಮತ್ತು ಬುಕ್ಕಿಗಳ ಪ್ರಕಾರ, 5 ಕಾರ್ಡಿನಲ್‌ಗಳು ಮುಂದಿನ ಪೋಪ್‌ನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ.
1) ಲೂಯಿಸ್ ಆಂಟೊನಿಯೋ ಟೇಗಲ್ (ಫಿಲಿಪೈನ್ಸ್): ಕಾರ್ಡಿನಲ್ ಲೂಯಿಸ್ ಆಂಟೊನಿಯೋ ಟಾಗಲ್‌ (67) ಪ್ರಸ್ತುತ ಬೆಟ್ಟಿಂಗ್‌ನಲ್ಲಿ 3:1 ರ ಅನುಪಾತದಲ್ಲಿ ಮುಂಚೂಣಿಯಲ್ಲಿದ್ದಾರೆ. ಪೋಪ್‌ ಫ್ರಾನ್ಸಿಸ್ ಅವರ ಪ್ರಗತಿರ ಕಾರ್ಯಸೂಚಿಯನ್ನು ಮುನ್ನಡೆಸಬಲ್ಲ ಸಮರ್ಥ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಬಹುತೇಕರ ವಿಶ್ವಾಸಪಾತ್ರವಹಿಸಿದ್ದರು.
) ಪೀಟ್ರೋ ಪರೋಲಿನ್ (ಇಟೆಲಿ): ಕಾರ್ಡಿನಲ್ ಪೀಟ್ರೋ ಪರೋಲಿನ್ (7) ವ್ಯಾಟಿಕನ್‌ನಲ್ಲಿ ಅತ್ಯಂತ ಹೆಚ್ಚು ಅನುಭವಿ ಅಧಿಕಾರಿಗಳ ಪೈಕಿ ಒಬ್ಬರು. ಇವರು ಬೆಟ್ಟಿಂಗ್‌ನಲ್ಲಿ 4:1 ಅನುಪಾತದೊಂದಿಗೆ ಮುಂದಿನ ಪೋಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 2013 ರಿಂದ ಇವರು ವ್ಯಾಟಿಕನ್‌ನ ಸೆಕ್ರಟರಿ ಆಫ್ ಸ್ಟೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಅನೇಕ ರಾಜತಾಂತ್ರಿಕ ವ್ಯವಹಾರಗಳು, ಚೀನಾ ಮತ್ತು ಮಧ್ಯಪ್ರಾಚ್ಯದ ಜತೆಗಿನ ಒಪ್ಪಂದ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678