ವಿಟ್ಲ: ಸಂತ ಪೌಲರ ದೇವಾಲಯ ದೇಲಂತ ಬೇಟ್ಟು ಇಲ್ಲಿಗೆ ನೂತನ ಧರ್ಮ ಗುರುಗಳಾಗಿ ಫಾದರ್ ರಿಚಾರ್ಜ್ ಡಿಸೋಜ ಅವರು ಮೇ 27 ರಂದು ಆಗಮಿಸಿದರು. ಈ ವೇಳೆ ಅವರನ್ನು ಭಕ್ತಾದಿಗಳು ಸ್ವಾಗತಿಸಿದರು. ನಿರ್ಗಮಿತ ಧರ್ಮಗುರು ವಂ. ಸುನೀಲ್ ಅವರು ನೂತನ ಧರ್ಮಗುರುಗಳಿಗೆ ಅಧಿಕಾರ ಹಸ್ತಾಂತರಿಸಿದರು.
ನಿರ್ಗಮಿತ ಧರ್ಮಗುರುಗಳಿಗೆ ವಿದಾಯ
ಸಂತ ಪೌಲರ ದೇವಾಲಯದಲ್ಲಿ ಆರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಧರ್ಮಗುರು ವಂ. ಸುನೀಲ್ ಅವರನ್ನು ಚರ್ಚ್ ಭಕ್ತಾಧಿಗಳು ಭಾರವಾದ ಮನಸ್ಸಿನಿಂದ ವಿದಾಯ ಹೇಳಿದರು. ಈ ವೇಳೆ ಅವರು ಕಳೆದ 6 ವರ್ಷಗಳಿಂದ ನೀಡಿದ ಸೇವೆಯನ್ನು ಸ್ಮರಿಸಿದರು.
ವಂ. ಫಾದರ್ ಸುನಿಲ್ ರವರು ದೇಲಂತಬೆಟ್ಟುವಿನಲ್ಲಿ ಹಲವು ಬಡವರಿಗೆ ಸಹಾಯ, ಪ್ರಾರ್ಥನೆ, ಮನೆ ಕಟ್ಟುವುದು, ಅನೇಕರ ಕಷ್ಟಗಳನ್ನು ಸಹಕರಿಸಿ ಉತ್ತಮವಾದ ಸೇವೆಯನ್ನು ಈ ಚರ್ಚಿನಲ್ಲಿ ಅವರು ಸಲ್ಲಿಸಿದ್ದಾರೆ ಎಂದು ನೆನಪಿಸಿಕೊಂಡರು. ಈ ವೇಳೆ ಎಲ್ಲರ ಕಣ್ಣಾಲಿಗಳು ತೇವವಾಗಿತ್ತು. ಸದ್ಯ ಅವರನ್ನು ಕಡಬ ಶಾಲೆಯ ಪ್ರಾಂಶುಪಾಲರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.