• Home  
  • *ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಮೋ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ*
- DAKSHINA KANNADA - HOME - LATEST NEWS

*ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಮೋ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ*

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಗ್ಯಪೂರ್ಣ ವಿಕಸಿತ ಭಾರತದ ಪರಿಕಲ್ಪನೆಯ ಸಂಸತ್‌ ಕ್ರೀಡೋತ್ಸವದ ಭಾಗವಾಗಿ ಇಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಮೋ ಬ್ಯಾಡ್ಮಿಟನ್‌ ಟೂರ್ನಮೆಂಟ್‌ನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಯ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಿದೆ. ಅಂಥಹ ಆರೋಗ್ಯವಂಥ ಭಾರತ ನಿರ್ಮಾಣದ ಪ್ರಯತ್ನವೇ ಈ ಸಂಸತ್‌ ಕ್ರೀಡೋತ್ಸವದ ಪ್ರಯುಕ್ತ ಆಯೋಜಿಸಿರುವ ಈ ನಮೋ ಕ್ರೀಡಾ […]

Share News

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಗ್ಯಪೂರ್ಣ ವಿಕಸಿತ ಭಾರತದ ಪರಿಕಲ್ಪನೆಯ ಸಂಸತ್‌ ಕ್ರೀಡೋತ್ಸವದ ಭಾಗವಾಗಿ ಇಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಮೋ ಬ್ಯಾಡ್ಮಿಟನ್‌ ಟೂರ್ನಮೆಂಟ್‌ನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಉದ್ಘಾಟಿಸಿದ್ದಾರೆ.


ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಯ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಿದೆ. ಅಂಥಹ ಆರೋಗ್ಯವಂಥ ಭಾರತ ನಿರ್ಮಾಣದ ಪ್ರಯತ್ನವೇ ಈ ಸಂಸತ್‌ ಕ್ರೀಡೋತ್ಸವದ ಪ್ರಯುಕ್ತ ಆಯೋಜಿಸಿರುವ ಈ ನಮೋ ಕ್ರೀಡಾ ಸ್ಪರ್ಧೆಗಳು. ಕಳೆದ ವಾರ ನಮೋ ಚೆಸ್‌ ಟೂರ್ನಿ ಆಯೋಜಿಸಲಾಗಿದ್ದು, ಇದೀಗ ನಮೋ ಬ್ಯಾಡ್ಮಿಂಟನ್‌ ಪಂದ್ಯಾಟಕ್ಕೆ ಚಾಲನೆ ನೀಡಲಾಗಿದೆ. ನಾಳೆ(ನ.30) ನಮೋ ವಾಲಿಬಾಲ್‌ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಭಾರತ ದೇಶವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯ ಹೆಜ್ಜೆ ಹಾಕುತ್ತಿದೆ. ಇಂಥಹ ಕಾಲಘಟದಲ್ಲಿ ಕೇವಲ ಫಿಟ್‌ ಇಂಡಿಯಾ ಭಾರತ ಮಾತ್ರ ವಿಕಸಿತ ಭಾರತವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ. ಅಲ್ಲದೇ ಕೇವಲ ಒಂದು ಯಂಗ್‌ ಇಂಡಿಯಾ ಮಾತ್ರ ವಿಕಸಿತ ಭಾರತವಾಗಲಿದೆ. ಹಾಗೆಯೇ ಒಂದು ಆತ್ಮನಿರ್ಭರ ಭಾರತ ಮಾತ್ರ ವಿಕಸಿತ ಭಾರತವಾಗಿ ನಿರ್ಮಾಣವಾಗುವುದಕ್ಕೆ ಸಾಧ್ಯ. ಹೀಗಿರುವಾಗ, ನಾವೆಲ್ಲ ಪ್ರಧಾನಿಯವರ ಕನಸಿತ ಆ ವಿಕಸಿತ ಭಾರತದ ಕನಸಿನತ್ತ ಹೆಜ್ಜೆ ಹಾಕುವುದಕ್ಕೆ ಕಾರ್ಯೋನ್ಮುಖರಾಗಬೇಕೆಂದು ಕ್ಯಾ. ಚೌಟ ಕರೆ ನೀಡಿದ್ದಾರೆ.


ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ಸಂಸತ್‌ ಕ್ರೀಡೋತ್ಸವು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಬಹಳ ಯಶಸ್ವಿಯಾಗಿ ಈ ಸಂಸತ್‌ ಕ್ರೀಡಾ ಮಹೋತ್ಸವನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ನಾನು ವಿಶೇಷವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.


ಉದ್ಘಾಟನೆ ಬಳಿಕ ಕ್ಯಾ. ಬ್ರಿಜೇಶ್‌ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್‌ ಅವರು ಬ್ಯಾಡ್ಮಿಂಟನ್‌ ಆಟವಾಡಿ ಗಮನಸೆಳೆದರು.

Share News