• Home  
  • ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ  ಕ್ಷೇತ್ರದಲ್ಲಿ  ಕಥೊಲಿಕ್ ಸಭಾ ವತಿಯಿಂದ ಪರಿಸರ ದಿನಾಚರಣೆ
- DAKSHINA KANNADA - HOME

ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ  ಕ್ಷೇತ್ರದಲ್ಲಿ  ಕಥೊಲಿಕ್ ಸಭಾ ವತಿಯಿಂದ ಪರಿಸರ ದಿನಾಚರಣೆ

ಮಂಗಳೂರು ಜೂನ್ 30 ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂತ ಜೋಸೆಫ್ ವಾಜ್ ದಕ್ಷಿಣ ವಲಯದ ನೇತೃತ್ವ ದಲ್ಲಿ ಕಥೊಲಿಕ್ ಸಭಾ ಮುಡಿಪು ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಲಯ ಜಂಟಿ ಆಶ್ರಯಲ್ಲಿ ಲವ್ದಾತ್ಸೊ ವನ ಮಹೋತ್ಸವ ಕಾರ್ಯಕ್ರಮ


ದಿನಾಂಕ:29-06-2025 ರಂದು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು ಇಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದಕ್ಷಿಣ ವಲಯ ಸಮಿತಿಯ ನೇತೃತ್ವದಲ್ಲಿ ಕಥೊಲಿಕ್ ಸಭಾ ಮುಡಿಪು ಚರ್ಚ್ ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

.ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ರೆಕ್ಟರ್ ಆಗಿರುವ ವಂದನೀಯ ಫಾ. ಆಸಿಸ್ಸಿ ರೆಬೆಲ್ಲೊರವರ ಆಶೀರ್ವಚನದ ನುಡಿಗಳಿಂದ ಪ್ರಾರ್ಥನೆ ಗೈದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಶ್ರೀ ಡೊಲ್ಫಿ ಡಿ ಸೋಜಾರವರು ಸರ್ವರನ್ನು ಸ್ವಾಗತಿಸಿದರು

, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ರಾಗಿರುವ ಶ್ರೀ ಆಲ್ವಿನ್ ಡಿ ಸೋಜಾ ಪನೀರ್ ರವರು ಮಾತನಾಡುತ್ತಾ ಈ ಪ್ರಕೃತಿಯ ಸಮತೋಲನ ಉಳಿಸಲು ಹಾಗೂ ನಮ್ಮ ಹಾಗೂ ನಮ್ಮ ಪೀಳಿಗೆಯ ಉಳಿವಿಗಾಗಿ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು,ಗಿಡಗಳನ್ನು ನೆಟ್ಟರೆ ಸಾಕಾಗುವುದಿಲ್ಲ ಅವುಗಳನ್ನು ಸಂರಕ್ಷಿಸಬೇಕು ಎಂದು ಕರೆಕೊಟ್ಟರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಕೋಟೆಕಾರು ವಲಯದ ಉಪವಲಯ ಅರಣ್ಯಧಿಕಾರಿಯಾದಂತಹ ಶ್ರೀ ಮೆಹಬೂಬ ಸಾಬರವರು ಮಾತನಾಡುತ್ತಾ ಇಂದು ನೆಟ್ಟ ಗಿಡಗಳನ್ನು ಪ್ರತಿಯಬ್ಬರೂ ದತ್ತು ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ಅದಕ್ಕೆ ನೀರು ಹಾಕಿ ಸಂರಕ್ಷಿಸಬೇಕು,ದಿನಗಳು ಹೋದಂತೆ ವಿವಿಧ ಕಾರಣಗಳಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಲಿ ಜಾಗದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಸಸ್ಯ ಸಂಕುಲ ಹೆಚ್ಚಾಗುವಂತೆ ಮುತುವರ್ಜಿ ವಹಿಸಬೇಕು ಎಂದು ಕರೆಕೊಟ್ಟರು

ವೇದಿಕೆಯಲ್ಲಿ ಮುಡಿಪು ಸಂತ ಜೋಸೆಫ್ ವಾಜ್ ಚರ್ಚಿನ ಪಾಲನಾ ಪರಿಷದ್ ನ ಉಪಾಧ್ಯಕ್ಷರಾದ ಶ್ರೀ ನವೀನ್ ಡಿ ಸೋಜಾ, ಕಾರ್ಯದರ್ಶಿ ಯಾದ ಶ್ರೀ ಸಂತೋಷ್ ಡಿ ಸೋಜಾ, ಕಥೊಲಿಕ್ ಸಭಾ ಮುಡಿಪು ಘಟಕದ ಅಧ್ಯಕ್ಷರಾದ ರೋಶನ್ ಡಿ ಸೋಜಾ, ಹೋಲಿ ಫ್ಯಾಮಿಲಿ ಕಾನ್ವೆಂಟ್ ಸುಪಿರಿಯರ್ ಆದಂತಹ ಸಿಸ್ಟರ್ ಫಾತಿಮಾ,ಕಥೊಲಿಕ್ ಸಭಾ ದಕ್ಷಿಣ ವಲಯದ ಕಾರ್ಯದರ್ಶಿ ಶ್ರೀಮತಿ ಟ್ರೆಸ್ಸಿ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಗಣ್ಯ ಅತಿಥಿಗಳು ಗಿಡನೆಡುವ ಮೂಲಕ ಉದ್ಘಾಟನೆ ನಡೆಸಲಾಯಿತು, ಅನಂತರ ಕಥೊಲಿಕ್ ಸಭಾ ಸದಸ್ಯರು ಪುಣ್ಯ ಕ್ಷೇತ್ರದ ವಠಾರದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಸುಮಾರು 300 ಗಿಡಗಳನ್ನು ನೆಟ್ಟರು.


ಫೆಲಿಕ್ಸ್ ಡಿ ಸೋಜಾರವರು ಕಾರ್ಯಕ್ರಮ ನಿರೂಪಿಸಿದರು,ಶ್ರೀಮತಿ ಟ್ರೆಸ್ಸಿ ರೊಡ್ರಿಗಸ್ ರವರು ಧನ್ಯವಾದ ಸಮರ್ಪಣೆ ಮಾಡಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678