• Home  
  • ಸುಳ್ಯದಲ್ಲಿ ತಾಯಿ & 3 ವರ್ಷದ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ-ಆತ್ಮಹತ್ಯೆ ಶಂಕೆ
- DAKSHINA KANNADA - HOME - LATEST NEWS

ಸುಳ್ಯದಲ್ಲಿ ತಾಯಿ & 3 ವರ್ಷದ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ-ಆತ್ಮಹತ್ಯೆ ಶಂಕೆ

ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತನ್ನ ತಂದೆ, ತಾಯಿ, ಪತ್ನಿ, ಮಗುವಿನೊಂದಿಗ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ರವಿವಾರ ಬೆಳಗ್ಗೆ ಕಾಣದೇ […]

Share News

ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತನ್ನ ತಂದೆ, ತಾಯಿ, ಪತ್ನಿ, ಮಗುವಿನೊಂದಿಗ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ರವಿವಾರ ಬೆಳಗ್ಗೆ ಕಾಣದೇ ಇದ್ದ ಸಂದರ್ಭ ಹುಡುಕಾಡಿದಾಗ ಮನೆ ಸಮೀಪದ ಇನ್ನೊಬ್ಬರ ಜಾಗದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ.

ಮಧುಶ್ರೀ ಅವರು ಮಗುವನ್ನು ಬಟ್ಟೆಯಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.ಪುತ್ತೂರು ಬೆಟಗೇರಿಯವರಾದ ಮಧುಶ್ರೀ ಅವರು ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News