• Home  
  • ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಏ.5ರಂದು ಮೂಡಪ್ಪ ಸೇವೆ
- HOME - LATEST NEWS

ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಏ.5ರಂದು ಮೂಡಪ್ಪ ಸೇವೆ

ಕಾಸರಗೋಡು: ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಏ.5ರಂದು ಮೂಡಪ್ಪ ಸೇವೆ ನಡೆಯಲಿದೆ.

ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಗುರುವಾರ ಸಿದ್ಧತೆ ನಡೆದಿದೆ. ದೀಪದ ಬಲಿ, ದರ್ಶನ ಬಲಿ, ಶತರುದ್ರಾಭಿಷೇಕ, 128 ತೆಂಗಿನಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮೂಡಪ್ಪ ಸೇವೆಯ ದ್ರವ್ಯಗಳ ಆಗಮನ, ದ್ರವ್ಯ ಪೂಜೆ ನಡೆದಿವೆ. ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ಬಳಗದಿಂದ ದಾಸಭಕ್ತಿ ಸಂಕೀರ್ತನೆ, ಬದಿಯಡ್ಕ ವಾಣಿಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.‌

 

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678