ಟೆಹ್ರಾನ್: ಆಯತುಲ್ಲಾ ಅಲಿ ಖಾಮಿನೈ ಅವರ ಎರಡನೇ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿದೆ. ಇವರ ಆಯ್ಕೆಗೆ ಐಆರ್‌ಜಿಸಿ ಸಹ ಸಮ್ಮತಿ ನೀಡಿದೆ ಎಂದು ತಿಳಿದು ಬಂದಿದೆ.

ಅಮೆರಿಕ ಹಾಗೂ ಇಸ್ರೇಲ್, ಇರಾನ್ ಮೇಲೆ ನಡೆಸಿದ ಯುದ್ಧದ ಮೊದಲ ದಿನವೇ ಸರ್ವೋಚ್ಚ ನಾಯಕರಾಗಿದ್ದ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟಿದ್ದರು. 56 ವರ್ಷದ ಧರ್ಮಗುರು ಆಗಿರುವ ಮೊಜ್ತಬಾ ಖಾಮಿನೈ, ಇರಾನ್ ನ ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಾಮಿನೈ ಅವರ ತಂದೆ ಆಯತುಲ್ಲಾ ಅಲಿ ಖಾಮಿನೈ ಅವರ ಜೊತೆಗೆ ಅವರ ತಾಯಿ, ಪತ್ನಿ ಮತ್ತು ಸಹೋದರಿಯೊಬ್ಬರು ಮೃತಪಟ್ಟಿದ್ದರು. ದಾಳಿಯ ವೇಳೆ ಮೊಜ್ತಬಾ ಖಾಮಿನೈ ಅವರು ಆ ಸ್ಥಳದಲ್ಲಿಲ್ಲದ ಕಾರಣ ಪಾರಾಗಿದ್ದರು.
ನಾವು ಸೂಚಿಸಿದ ವ್ಯಕ್ತಿ ಅಥವಾ ನಾವು ಸೂಚಿಸಿದ ಸರಕಾರ ಇರಾನ್‌ನಲ್ಲಿ ಅಸ್ವಿತ್ವಕ್ಕೆ ಬಾರದೇ ಇದ್ದಲ್ಲಿ ಅಂತಹ ಸರ್ಕಾರ ಅಥವಾ ವ್ಯಕ್ತಿ ನಾಶವಾವುದು ಖಂಡಿತ ಎಂದು ಅಮೇರಿಕ ಹೇಳಿದ್ದು, ಇರಾನ್‌ನ ಹೊಸ ಆಯ್ಕೆಯ ನಂತರ ಮುಂದೇನು ನಡೆಯಲಿದೆ ಎಂಬ ಪ್ರಶ್ನೆ ಮೂಡಿದೆ.

