canaratvnews

ದೈವಾರಾಧನೆ, ಹುಲಿವೇಷ ಕುಣಿಸುವ ತಾಸೆಯ ವೈಭವಕ್ಕೆ ಸೌಹಾರ್ದದ ಕಲಶ!

ಮಂಗಳೂರು .ಸೆ 17 : ನವರಾತ್ರಿ, ದಸರಾ ಸಂಭ್ರಮಕ್ಕೆ ನಾಡು ಸಿದ್ದಗೊಂಡಿದೆ. ಎಲ್ಲೆಲ್ಲೂ ಹುಲಿ ವೇಷದ ಸಂಭ್ರಮದ ಕುಣಿತಕ್ಕೆ ತಾಸೆಯ ಶಬ್ದಕೇಳಲು ಶುರುವಾಗುತ್ತಿದೆ. ವಿಶೇಷವೆಂದರೆ, ಈ ತಾಸೆಯ ಶಬ್ದ ಕೇಳಲು ಮುಖ್ಯವಾಗಿ ಬೇಕಾಗಿರುವ ತಾಸೆಯೊಳಗಿನ “ಕಲಶ ಕರಾವಳಿಯಲ್ಲಿ ಸೌಹಾರ್ದದ ಬೆಸುಗೆ ಬೆಸೆದಿದೆ!

ಮಂಗಳೂರು ಹೊರವಲಯದ ಎಡಪದವಿನ ಮೊಹಮ್ಮದ್ ರಫೀಕ್ ಅವರು ಮೂರು ದಶಕಗಳಿಂದ ತುಳುನಾಡಿನ ದೈವಾರಾಧನೆ ಹಾಗೂ ಹುಲಿವೇಷಗಳಿಗೆ ಪ್ರಮುಖವಾದ ವಾದ್ಯ ಪ್ರಕಾರವಾದ ತಾಸೆಯ ತಯಾರಿಯಲ್ಲಿ ಅತ್ಯಂತ ಅಗತ್ಯ ಭಾಗವಾದ ‘ಕಲಶ’ ನಿರ್ಮಾ ಣದಲ್ಲಿ ತೊಡಗಿಸಿಕೊಂಡಿದ್ದಾರೆ. ತಾನೆ ಮಾಡಲು ಬಹುಮುಖ್ಯವಾಗಿ ಕಲಶವೇ ಪ್ರಧಾನ. ಕಲಶ ಸರಿಯಾಗಿ ಆಗಿದ್ದರೆ ಮಾತ್ರ ತಾಸೆಯಲ್ಲಿ ಶಬ್ದ ಉತ್ತಮ ವಾಗಿ ಕೇಳುತ್ತದೆ. ಬಳಿಕ ಫೈಬರ್. ಕುಟ್ಟಿ ಹಗ್ಗ ಎಲ್ಲವನ್ನು ಬಿಗಿದು ತಾಸೆಯ ಹೊರಗಿನ ರಚನೆ ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಕಲಶ ರಚನೆ ಮಾಡುವವರು ಹಾಗೂ ತಾನೆ ನಿರ್ಮಿಸುವವರು ಹಲವರಿದ್ದಾರೆ. ಈ ಪೈಕಿ ರಫೀಕ್ ಅವರು ಸೌಹಾರ್ದತೆಯ ಮೂಲಕ ಭಿನ್ನವಾಗಿ ಕಂಡುಬರುತ್ತಾರೆ.

ಶೇಕ್ ಆಮೀರ್‌ ಹುಸೇನ್ ಹಾಗೂ ಕುಲ್ ಸುಂದಿ ಅವರ ಪುತ್ರ ಮೊಹಮ್ಮದ್ ರಫೀಕ್ ಅವರು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ತಾಮ್ರದ ಕೆಲಸದಲ್ಲಿ ತಂದೆಯವರ ಜತೆಗೆ ಅಭ್ಯಾಸ ಮಾಡಿದರು.’ನನಗೀಗ 58 ವರ್ಷ. ದಿನದಲ್ಲಿ ಕಷ್ಟಪಟ್ಟು ಒಂದು ಕಲತ ಆಷ್ಟೇ ಮಾಡಲು ಸಾಧ್ಯ. ಆದರೆ, ಈಗ ಒತ್ತಾಯದ ಮೇರೆಗೆ ಕಷ್ಟಪಟ್ಟು ದಿನಕ್ಕೆ ಎರಡು ಕಲಶ ಮಾಡುತ್ತಿದ್ದೇನೆ. ಸಣ್ಣ ತಾನೆ ಈಗ ಅಧಿಕ ಬಳಕೆಯಲ್ಲಿದೆ. ಅದರ ಕೆಲಸ ಮಾಡುವುದು ಕೊಂಚ ಕಷ್ಟ ಇದು ರೆಡಿಮೇಡ್ ಆಗಿ ಸಿಗುವುದಿಲ್ಲ. ಹೀಗಾಗಿ ಬೆಳಗಿನಿಂದ ಸಂಜೆಯವರೆಗೆ ಕೈಯಲ್ಲಿ ಗುದ್ದಿ ಗುದ್ದಿಯೇ ಕೆಲಸ ಮಾಡಬೇಕಾಗುತ್ತದೆ. ದೇವರು ಹಾಗೂ ತಾಸೆಯವರ ಆಶೀರ್ವಾದದಿಂದ ಒಳ್ಳೆಯದಾಗಿದೆ. ಇದನ್ನು ಕಲಿಯಲು ಮಾಡುವ ಕಾರಣದಿಂದ ಕಷ್ಟ ಎಂದು ಮುಂದೆ ಬರುತ್ತಿಲ್ಲ ಯಾರೂ ಮುಂದೆ ಬರುತ್ತಿಲ್ಲ ಕೈಯಲ್ಲಿ ಗುದ್ದಿ ಗುದ್ದಿ ಕೆಲಸ ಆದರೆ. ನನಗೆ ನನ್ನ ತಂದೆಯವರ ಮಾರ್ಗದರ್ಶನದಂತೆ ಇದೇ ಕೆಲಸವನ್ನು ನಡೆಸುತ್ತಿದ್ದೇನೆ. ಮಾರ್ಕೆಟ್ ನಿಂದ ಸುಮಾರು 2 ಕಿಲೋ ತೂಕದ ತಗಡು ತರಲಾಗುತ್ತದೆ. ಅದನ್ನು ಸುತ್ತಿಗೆಯ ಮೂಲಕ ಗಟ್ಟಿಯಾಗಿ ನಿಯಮಿತವಾಗಿ ಹೊಡೆಯಬೇಕು. ಬಳಿಕ ಬೆಂಕಿಯಲ್ಲಿ ಬಿಸಿ ಮಾಡಬೇಕು. ತಣ್ಣೀರಲ್ಲಿ ಹಾಕಿ ಮತ್ತೆ ತೆಗಡಿಗೆ ಗುದ್ದಬೇಕು. ಹೀಗೆ | ತಾಸೆಯ ಕಲಶ ಆಗಬೇಕಾದರೆ 7-8 ಬಾರಿ ಬಿಸಿ ಮಾಡಲೇಬೇಕು. ಅಷ್ಟು ಬಾರಿ ಸುತ್ತಿಗೆಯ ಮೂಲಕ ಕೈಯಿಂದ ಗುದ್ದಬೇಕು. ನಂತರ ಅದು ಡೂಮ್ ರೂಪಕ್ಕೆ ಬರುತ್ತದೆ. ಫಿನಿಶಿಂಗ್ -ನಲ್ಲಿ ಶೈನಿಂಗ್ ಸಹಿತ ಎಲ್ಲಾ ಕೆಲಸವನ್ನು ಸೂಕ್ಷ್ಮವಾಗಿ ಮಾಡಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಹೀಗೆ ಗುದ್ದುತ್ತಿರುವ ರಫೀಕ್ ಅವರಿಗೆ ಸದ್ಯ ಕೈ ನೋವು ಇದೆ. ತಾಸೆಯವರು ಬಂದಾಗ ಕಲಶವನ್ನು ಭಕ್ತಿಯಿಂದ ಅವರಿಗೆ ನೀಡುತ್ತಾರೆ. ಒಳ್ಳೆಯದಾಗಲಿ ಎಂದು ಹರಕೆಯ ಹಣ ಕೂಡ ಮೀಸಲಿಡುತ್ತಾರೆ ಅವರು!

ಕಲಶವಿದ್ದರೆ ಮಾತ್ರ ತಾಸೆಯಲ್ಲಿ ಶಬ್ದ! ಅಂಶಗಳು ಯಾವುದು ಹಾಗೂ ಅದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಕೆಲವರಿಗೆ ತಿಳಿದಿಲ್ಲ ಮೊದಲು ಚರ್ಮದ ತಾಸೆ ತಾಸೆಯ ಶಬ್ದವನ್ನು ಹತ್ತಿರದಿಂದ ಹಲವರು ಕೇಳಿದ್ದಾರೆ. ಆದರೆ ಅಷ್ಟು ದೊಡ್ಡ ಶಬ್ದ ಬರಲು ಮುಖ್ಯ ಕಾರಣವಾದ ಕೇಳುತ್ತದೆ ಆದರೆ ಈಗ ಫೈಬರ್ ಶಾಸೆ ಅಧಿಕವಿದೆ. ಅದರಲ್ಲಿಯೂ ಸೈಜ್ ಪ್ರಕಾರ ದೊಡ್ಡ ಸಣ್ಣದು ಬರುತ್ತಿದೆ ಅದರ ಬರುತ್ತಿತ್ತು. ಅದಕ್ಕೆ ನಮ್ಮ ಕಲಶ ಇಟ್ಟಾಗ ಅದರ ಶಬ್ದ ಬಾರೀ ಇರುತ್ತದೆ. ಅದು ಸುಮಾರು ಒಂದೂವರೆ ಕಿ.ಮೀ. ದೂರಕ್ಕೆ ಶಬ್ದ ಹತ್ತಿರಕ್ಕೆ ಮಾತ್ರ ಕೇಳುವುದು-ದೂರಕ್ಕೆ ಇಲ್ಲ ಅಷ್ಟಮಿ, ಚೌತಿ, ನವರಾತ್ರಿ ಸಂದರ್ಭ ಹುಲಿವೇಷಕ್ಕೆ ಜಾಸ್ತಿ ಡಿಮಾಂಡ್ ಬರುತ್ತದೆ. ಉಳಿದಂತೆ ದೈವಾರಾಧನೆಗೆ ಸಂಬಂಧಿಸಿ ತಾಸೆ ಮಾಡುತ್ತಿದೇನೆ ಎನ್ನುತ್ತಾರೆ ಮೊಹಮದ್ ರಫೀಕ್

ತಾಸೆಯವರ ಪ್ರೀತಿಯೇ ಆಶೀರ್ವಾದ. ಮೊಹಮ್ಮದ್ ರಫೀಕ್ ಆಸ್ತಿಪಾಸ್ತಿ ನಾವು ಮಾಡಿಲ್ಲ. ಬಾಡಿಗೆ ಮನೆಯಲ್ಲಿ ನಾವಿದ್ದೇವೆ. ಆದರೆ ತಾಸೆಯವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ ನೋಡುವಾಗ ಹೃದಯ ತುಂಬಿ ಬರುತ್ತದೆ. ಈಗ ಹೊಸಬರು ತಾಸೆಯಲ್ಲಿ ತುಂಬ ಜನ ಬರುತ್ತಿದ್ದಾರೆ. ಅವರಿಗೆ ನಾವು ಕಲಶ ನೀಡಿ ಒಳ್ಳೆಯದಾಗಿದೆ ಎಂದು ಅವರ ಮಾತು ಕೇಳುವಾಗಲೇ ಖುಷಿ ಆಗುತ್ತಿದೆ. ಹೊರಜಿಲ್ಲೆಗಳಿಂದ ಕೇಳಿಕೊಂಡು ಬರುತ್ತಿದ್ದಾರೆ. ನಾನು ಯಾವತ್ತೂ ಧರ್ಮ ಆಧಾರಿತವಾಗಿ ಭೇದ ಭಾವ ಮಾಡುವುದೇ ಇಲ್ಲ ಸೌಹಾರ್ದತೆಯಿಂದ ನಾವು ಇದ್ದೇವೆ.

Share News
Exit mobile version