canaratvnews

ಮೊಗರ್ನಾಡ್ ದೇವ ಮಾತಾ ಚರ್ಚ್ ನಲ್ಲಿ 250ನೇ ಮಹೋತ್ಸವ ಪವಿತ್ರ ಬಲಿ ಪೂಜೆ ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರ ಸಮಾವೇಶ

ವಿಟ್ಲ: ಅ20 : ಬಂಟ್ವಾಳ ತಾಲೂಕಿನ ಮೊಗರ್ನಾಡ್
ದೇವ ಮಾತಾ ಚರ್ಚ್ ನಲ್ಲಿ 250ನೇ ಮಹೋತ್ಸವದ ಪ್ರಯುಕ್ತ ಪವಿತ್ರ ಬಲಿ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ಮೊಗರ್ನಾಡ್‌ನ ದೇವ ಮಾತಾ ಚರ್ಚ್ ತನ್ನ 250ನೇ ಮಹೋತ್ಸವ (ಜ್ಯೂಬಿಲಿ) ಸಂತಸದ ಸಂದರ್ಭದಲ್ಲಿ ಧರ್ಮಗುರುಗಳು, ಧಾರ್ಮಿಕ ಸಹೋದರರು ಮತ್ತು ಸಹೋದರಿಯರು, ಮದುವೆಯಾಗಿ ಚರ್ಚ್‌ನಿಂದ ಹೊರಹೋಗಿರುವ ಮಹಿಳೆಯರು ಹಾಗೂ ಚರ್ಚ್‌ನಿಂದ ಹೊರಗೆ ವಾಸಿಸುತ್ತಿರುವ ಕುಟುಂಬಗಳನ್ನು ಗೌರವಿಸುವ ವಿಶೇಷ ಸಮಾರಂಭವನ್ನು ಆಯೋಜಿಸಿತ್ತು.

ಫಾ. ಮ್ಯಾಕ್ಸಿಮ್ ಡಿಸಿಲ್ವಾ ಮತ್ತು ಇತರ ಧರ್ಮಗುರುಗಳು ಪವಿತ್ರ ಬಲಿ ಪೂಜೆ ನಡೆಸಿದರು. ವಂದನೀಯ ಫಾ. ಐವನ್ ಮೈಕಲ್ ರೊಡ್ರಿಗಸ್ ಅವರು ಧರ್ಮೋಪದೇಶ ನೀಡಿದರು. ಪೂಜೆಯ ನಂತರ, ದೇವ ಮಾತಾ ಸಭಾ ಭವನದಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ, ಚರ್ಚ್‌ನ ಕುಟುಂಬದ ಧಾರ್ಮಿಕ ಸಹೋದರಿಯರು, ಚರ್ಚ್ ಕಾನ್ವೆಂಟ್‌ನಲ್ಲಿ ಸೇವೆ ಸಲ್ಲಿಸಿದ ಸಹೋದರಿಯರು, ಚರ್ಚ್ ಕುಟುಂಬದ ಧರ್ಮಗುರುಗಳು ಮತ್ತು ಈ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು ಪ್ರೀತಿಯೊಂದಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಒಟ್ಟು 29 ಧರ್ಮಗುರುಗಳು, 39 ಧಾರ್ಮಿಕ ಸಹೋದರಿಯರು ಮತ್ತು ಮದುವೆಯಾದ ನಂತರ ಮೊಗರ್ನಾಡ್‌ನಿಂದ ಬೇರೆಡೆ ನೆಲೆಸಿದ 29 ಕುಟುಂಬಗಳು ಈ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಸಿಸ್ಟರ್ ಸಾಧನಾ ಬಿ.ಎಸ್, ಫಾ. ಸಂತೋಷ್ ಡಿಕುನ್ಹಾರವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ. ಐವನ್ ಮೈಕಲ್ ರೊಡ್ರಿಗಸ್ ಅವರು ತಮ್ಮ ಹೃತ್ಪೂರ್ವಕ ಸಂದೇಶಗಳನ್ನು ಹಂಚಿಕೊಂಡರು. ಈ ಐತಿಹಾಸಿಕ ಮೈಲಿಗಲ್ಲಿನ ಸಂದರ್ಭದಲ್ಲಿ ಎಲ್ಲರಿಗೂ ಆಶೀರ್ವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ, ಚರ್ಚ್‌ನ ICYM ನ ಸದಸ್ಯರು ನೃತ್ಯ ಮತ್ತು ಕಿರುನಾಟಕವನ್ನು ಪ್ರದರ್ಶಿಸಿದರು.

ವಂದನೀಯ ಫಾ. ಐವನ್ ಮೈಕಲ್ ರೊಡ್ರಿಗಸ್, ವಂದನೀಯ ಫಾ. ಅನಿಲ್ ಕೆನ್ಯೂಟ್ ಡಿ’ಮೆಲ್ಲೊ, ಶಾಲಾ ಪ್ರಾಂಶುಪಾಲ ವಂದನೀಯ ಫಾ. ನವೀನ್ ಪ್ರಕಾಶ್ ಪಿಂಟೊ,
ವಂದನೀಯ ಫಾ. ಲಾರೆನ್ಸ್ ಪಿರೇರಾ
, ಸಿಸ್ಟರ್ ಕ್ರಿಸ್ಟಿನ್ ಅಂದ್ರಾದೆ, ದೇವ ಮಾತಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಆ್ಯನ್ನಿ ಡಿಸೋಜಾ,
ಉಪಾಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ, ಕಾರ್ಯದರ್ಶಿ ಶ್ರೀ ವಿಲ್ ಫ್ರೆಡ್ ಲೋಬೋ, 21 ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್, ಜ್ಯೂಬಿಲಿ ಸಮಿತಿಯ ಸಂಚಾಲಕರು ಮತ್ತು ಸರ್ವ ಸದಸ್ಯರು, ದೇವಾಲಯದ ಪರಿಷತ್ತಿನ ಸದಸ್ಯರು ಮತ್ತು ದೇವ ಮಾತಾ ಚರ್ಚ್‌ನ ಕುಟುಂಬಸ್ಥರು ಉಪಸ್ಥಿತರಿದ್ದರು.

ಮೊಗರ್ನಾಡ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ. ಅನಿಲ್ ಕೆನ್ಯೂಟ್ ಡಿ’ಮೆಲ್ಲೊ ಅವರು ಸ್ವಾಗತಿಸಿದರು. ಜ್ಯೂಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಅವರು ವಂದಿಸಿದರು. ಫಾ. ಸೈಮನ್ ಡಿಸೋಜಾ ಅವರು ಪ್ರಾರ್ಥಿಸಿದರು. ಡೀಕನ್ ಅವಿಲ್ ಸಂತುಮಾಯರ್ ಅವರು ಕಾರ್ಯಕ್ರಮದ ನಿರೂಪಿಸಿದರು.

Share News
Exit mobile version