ಪುತ್ತೂರು: ಬಡವರ ಕಲ್ಯಾಣಕ್ಕಾಗಿ ಮನ್ ರೇಗಾಯೋಜನೆ ಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಿತ್ತು ಇದರಿಂದ ದೇಶದ ಕೋಟ್ಯಂತರ ಬಡವರಿಗೆ ನೆರವಾಗಿದೆ ಈ ಯೋಜನೆಯನ್ನು ಕೇಂದ್ರದ ಬಿಜೆಪಿ ಸರಕಾರ ಪರೋಕ್ಷವಾಗಿ ರದ್ದುಪಡಿಸಿದ್ದು ಮಾತ್ರವಲ್ಲದೆ ದೇಶದ ಬಡವರ ಮೇಲೆ ದಾಳಿ ನಡೆಸಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಕೇಂದ್ರದ ಬಿಜೆಪಿ ಸರಕಾರ ನರೇಗಾ ಯೋಜನೆಗೆ ಕತ್ತರಿಹಾಕುವ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ಅಳಿಸಿದ್ದು ಮಾತದರವಲ್ಲದೆ ದೇಶದ ಕಟ್ಟಕಡೇಯ ವ್ಯಕ್ತಿಗೂ ಅನ್ಯಾಯ ಮಾಡಿದೆ. ಜಿಲ್ಲೆಗೆ ಇದುವರೆಗೆ ನರೇಗಾ ಯೋಜನೆಯ ಮೂಲಕ 260ಕೋಟಿ ಕೂಲಿ ನೀಡಲಾಗಿದೆ. ಕೇಂದ್ರದ ಹೊಸ ಕಾನೂನಿನ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದ ಯಾವುದೇ ಕೂಲಿ ,ಕಾಮಗಾರಿ ನಡೆಯುವುದು ಸಾಧ್ಯವಿಲ್ಲ. ಕೇಂದ್ರದ ನಿರ್ಧಾರದ ವಿರುದ್ದ ಪಕ್ಷಾತೀತವಾಗಿ ದೇಶಾಧ್ಯಂತ ಹೋರಾಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಡವರ ಪರ ಕಾಂಗ್ರೆಸ್ ಮಾತ್ರ ಎಂಬುದನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದಾರೆ ಎಂದು ಶಾಸಕರು ಹೇಳಿದರು.