canaratvnews

*ರಾಜ್ಯ ಬಜೆಟ್ ನಲ್ಲಿ ಕರಾವಳಿ ಸಂಪೂರ್ಣ ಕಡೆಗಣನೆಗೆ ಶಾಸಕ ಕಾಮತ್ ಆಕ್ರೋಶ*

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯ ಬಜೆಟ್ ಕರಾವಳಿ ಭಾಗದ ಪಾಲಿಗೆ ಅತ್ಯಂತ ನೀರಸವಾಗಿದ್ದು, ಈ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘೋಷಣೆಗಳು ಅನುಷ್ಠಾನವಾಗಿಲ್ಲ: “ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ” ಎಂದು ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿಗಳು, ಕಳೆದ ಬಜೆಟ್‌ನಲ್ಲಿ ಕರಾವಳಿಗೆ ನೀಡಿದ್ದ ಭರವಸೆಗಳನ್ನು ಎಷ್ಟು ಈಡೇರಿಸಿದ್ದಾರೆ ಎಂಬ ವರದಿಯನ್ನು ಮೊದಲು ನೀಡಲಿ. ಇಲ್ಲದಿದ್ದರೆ ಈ ಬಜೆಟ್ ಕೂಡ ಕೇವಲ ಬಿಳಿ ಹಾಳೆಯಷ್ಟೇ ಆಗಿ ಉಳಿಯಲಿದೆ.
ಒಟ್ಟಾರೆಯಾಗಿ, ಈ ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದು, ಕೇವಲ ಕಾಟಾಚಾರದ ಮಂಡನೆಯಾಗಿದೆ ಎಂದು ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
Share News
Exit mobile version