canaratvnews

ಕದ್ರಿ ಶಿವಭಾಗ್   ಅಪಾರ್ಟ್ಮೆಂಟಿನ ಹಿಂಬದಿಯ ಬೃಹತ್ ತಡೆಗೋಡೆ ಕುಸಿದು  ಫ್ಲ್ಯಾಟ್ ಗಳಿಗೆ ತೀವ್ರ ಹಾನಿ   ಶಾಸಕ ವೇದವ್ಯಾಸ ಕಾಮತ್  ಭೇಟಿ

ಮಂಗಳೂರು ಜೂನ್ 17 ನಗರದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಗೆ ಕದ್ರಿ ಶಿವಭಾಗ್ ನ ಮುಖ್ಯ ರಸ್ತೆಯ ಸುಂದರಿ ಅಪಾರ್ಟ್ಮೆಂಟಿನ ಹಿಂಬದಿಯ ಬೃಹತ್ ತಡೆಗೋಡೆ ಕುಸಿದು ಅಲ್ಲಿನ ಫ್ಲ್ಯಾಟ್ ಗಳಿಗೆ ತೀವ್ರ ಹಾನಿಯಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಪರಿಶೀಲಿಸಿದರು.


ತೀವ್ರ ಮಳೆಯಿಂದ ತಡೆಗೋಡೆ ಇದ್ದ ಭಾಗದ ಗುಡ್ಡವೇ ಕುಸಿದಿದ್ದು, ಆ ರಭಸಕ್ಕೆ ಅಪಾರ್ಟ್ಮೆಂಟಿನ ಎರಡು ಮನೆಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಣ್ಣು ಕುಸಿದ ನಂತರ ಇದೀಗ ಅಲ್ಲಿನ ಮರಗಳೂ ಸಹ ಅಪಾಯಕಾರಿ ಸ್ಥಿತಿಯಲ್ಲಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾದಾಗ ಹಿಂದಿನ ಬಿಜೆಪಿ ಸರ್ಕಾರ ಗರಿಷ್ಟ 5 ಲಕ್ಷದವರೆಗೂ ಪರಿಹಾರ ನೀಡುತ್ತಿತ್ತು. ಅಲ್ಲದೇ 35 ಕೋಟಿ ವಿಶೇಷ ಅನುದಾನದ ಮೂಲಕ ಕುಸಿದ ತಡೆಗೋಡೆಗಳ ಸಹಿತ ಕ್ಷೇತ್ರದ ಅನೇಕ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಆ ಎಲ್ಲಾ ಪರಿಹಾರ ಧನಕ್ಕೂ ಕತ್ತರಿ ಹಾಕಿರುವುದರಿಂದ ಇಲ್ಲಿನ ಜನತೆ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಶಾಸಕರು ಆಗ್ರಹಿಸಿದರು.



ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಕಾವ್ಯ ನಟರಾಜ್ ಆಳ್ವ, ಬಿಜೆಪಿ ಪ್ರಮುಖರಾದ ನವೀನ್ ಶೆಣೈ, ಪದ್ಮನಾಭ ನಾಯಕ್, ಯೋಗೀಶ್ ಶೆಣೈ, ಕಿರಣ್ ರೈ, ಅಪಾರ್ಟ್ಮೆಂಟಿನ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Share News
Exit mobile version