canaratvnews

*ಅತ್ತಾವರ 40 ಲಕ್ಷ ರೂ. ವೆಚ್ಚದ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ*

ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡ್‌ನಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, “ಈ ಭಾಗದ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣದ ಅನಿವಾರ್ಯತೆಯನ್ನು ಮನಗಂಡು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ, ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳ ಅನುದಾನಕ್ಕೆ ತಡೆ ನೀಡಿದ್ದರಿಂದ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದವು. ಸತತ ಪ್ರಯತ್ನ ಮತ್ತು ಹಲವು ಬಾರಿ ಮನವಿ ಮಾಡಿದ ಪರಿಣಾಮವಾಗಿ ಈಗ ತಡೆ ಹಿಡಿಯಲಾಗಿದ್ದ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ,” ಎಂದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ ಶೆಟ್ಟಿ, ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ದೇವದಾಸ್ ಶೆಟ್ಟಿ, ಚಂದ್ರಹಾಸ್ ಕೊಟ್ಟಾರಿ ಹಾಗೂ ವಾರ್ಡ್ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಬೂತ್ ಅಧ್ಯಕ್ಷರುಗಳಾದ ಗಣೇಶ್ ಕೊಟ್ಟಾರಿ, ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್, ಸೋಮಶೇಖರ್, ಗಣೇಶ್, ಕಾರ್ಯದರ್ಶಿ ಲೋಕೇಶ್, ನಾರಾಯಣ ಕುಂದರ್ ಹಾಗೂ ಪ್ರಮುಖರಾದ ಪ್ರವೀಣ್ ನಿಡ್ಡೆಲ್, ಲಲಿತಾ, ಪ್ರೀತಾ ಕಾಮತ್, ತರುಣ್, ಪೂಜಾ, ಪ್ರೇಮಲತಾ ನಾಯ್ಕ, ಲೋಲಾಕ್ಷಿ, ನಟೇಶ್, ಸೀತಾರಾಮ್ ಶೆಟ್ಟಿ, ಯೋಗೀಶ್, ಮುರಳೀಧರ, ಪುರುಷೋತ್ತಮ್, ಪ್ರಿಯತ್, ನಳಿನಿ, ಪೂರ್ವಿ, ಶರತ್, ಶಶಿಕಲಾ, ಕುಶಾಲ, ಚೈತ್ರ, ನಮ್ರತ, ಮೀರಾ, ಜೀವಿತ್, ಸಂಭ್ರಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share News
Exit mobile version