ಪುತ್ತೂರು: ಡಿ ಸಿ ಮನ್ನಾ ಉಳಿಕೆ ಜಮೀನನ್ನು ನಿವೇಶನ ರಹಿತ ಪ ಜಾತಿ ಮತ್ತು ಪಪಂಗಡದ ವರಿಗೆ ಮಂಜೂರು ಮಾಡುವಂತೆ ಸರಕಾರಕ್ಕೆ ಆಗ್ರಹಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದ ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮನವಿ ಮಾಡಿದರು.
ಶಾಸಕರನ್ನು ಭೇಟಿಯಾದ ನಿಯೋಗ ಈ ವಿಚಾರದಲ್ಲಿ ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಆದರೆ ಇದುವರೆಗೂ ಯಾವ ಜನಪ್ರತಿನಿಧಿಗಳೂ ನಮ್ಮ ಬೆಂಬಲಕ್ಕೆ ಬಂದಿಲ್ಲ. ಈ ಬಾರಿ ನಿಮ್ಮ ಮೂಲಕ ನಾವು ಮನವಿ ಮಾಡಿ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಚರ್ಚೆ ನಡೆಸಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.