• Home  
  • ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆ: 25 ವರ್ಷಗಳ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ
- DAKSHINA KANNADA - HOME

ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆ: 25 ವರ್ಷಗಳ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆಗೆ ಕೊನೆಗೂ‌ಮುಕ್ತಿ ದೊರಕಿದೆ. ರಸ್ತೆ ವಿವಾದದಿಂದ‌ಇಲ್ಲಿನ ಸುಮಾರು ಕುಟುಂಬಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದ ಗ್ರಾಮಸ್ಥರು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು.
ವಿವಾದಯುತ ರಸ್ತೆಯ ವಿಚಾರವಾಗಿ ಮಾತುಕತೆ ನಡೆಸಿದ ಶಾಸಕರು ರಸ್ತೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ 25 ವರ್ಷಗಳ ನರಕಯಾತನೆಗೆ ಮುಕ್ತಿಯನ್ನು ನೀಡಿದ್ದಾರೆ.
ರಸ್ತೆ ಮಾಡಿಸಿಕೊಟ್ಟ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಮಸ್ಥರು ನೀವು ಮಾಡಿದ ಉಪಕಾರವನ್ನು ಎಂದಿಗೂ ಮರೆಯಲಾರೆವು, ದೇವರ ರೂಪದಲ್ಲಿ ಬಂದು ನಮ್ಮ ಕಷ್ಟಕ್ಕೆ ಪರಿಹಾರ ನೀಡಿದ್ದೀರಿ ಎಂದು ಅಭಿನಂದಿಸಿದರು.

ಸ್ಥಳೀಯರ ಪರವಾಗಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಣ ಪಂಜಿಗುಡ್ಡೆ ಈಶ್ವರಭಟ್ ಅವರು ಈ ಭಾಗದ ಜನರು ಅನೇಕ ವರ್ಷಗಳಿಂದ ಗ್ರಾಪಂ ಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೂ ಕ್ಯಾರೇ ಮಾಡಿರಲಿಲ್ಲ. ಶಾಸಕರು ಮಾತುಕತೆ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ. ಶಾಸಕರು ಇಲ್ಲದೇ ಇರುತ್ತಿದ್ದರೆ ಈ ರಸ್ತೆಯೇ ಆಗುತ್ತಿರಲಿಲ್ಲ. ಬಡ ಜನತೆಯ ಕಣ್ಣೀರೊರೆಸಿದ ಶಾಸಕರನ್ನು ಜನತೆ ಎಂದೂ ಮರೆಯಬಾರದು ಎಂದು ಹೇಳಿದರು.
ಈ ರಸ್ತೆಯನ್ನು ಕಾಂಕ್ರೀಟ್ ಮಾಡಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ
ಬಾಳಪ್ಪ ಗೌಡ, ಪುಷ್ಪಾವತಿ,ವಿಶ್ವಾಸ್ ನಂದೀಸ್, ಮನೋಜ್ ,ದೇವಕಿ, ಪ್ರೇಮ,ಪುರುಷೋತ್ತಮ ಕುಲಾಲ್, ವಿಧ್ವಪ್ರಸಾದ್, ತುಶಾನ್, ಶೀನಪ್ಪ ಪೂಜಾರಿ, ಗಂಗಾಧರ ಕಡ್ತಿಮಾರ್, ರೋಜನ್ ರಾಜ್ ಉಪಸ್ಥಿತರಿದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678