• Home  
  • ಕೆಂಪು ಕಲ್ಲು ಸಮಸ್ಯೆ: ಸಚಿವ ಮಲ್ಲಿಕಾರ್ಜುನರನ್ನು ಭೇಟಿಯಾದ ಶಾಸಕ ಅಶೋಕ್ ರೈ ಕ್ಯಾಬಿನೆಟ್ ಸಭೆಯಲ್ಲಿ ಸಮಸ್ಯೆ ಇತ್ಯರ್ಥದ ಭರವಸೆ
- HOME - STATE

ಕೆಂಪು ಕಲ್ಲು ಸಮಸ್ಯೆ: ಸಚಿವ ಮಲ್ಲಿಕಾರ್ಜುನರನ್ನು ಭೇಟಿಯಾದ ಶಾಸಕ ಅಶೋಕ್ ರೈ ಕ್ಯಾಬಿನೆಟ್ ಸಭೆಯಲ್ಲಿ ಸಮಸ್ಯೆ ಇತ್ಯರ್ಥದ ಭರವಸೆ

ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಮಸ್ಯೆಯ ಬಗ್ಗೆ ಗಣಿಮತ್ತು ತೋಟಗಾರಿಕಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕ ಸಮಸ್ಯೆಯ ಬಗ್ಹೆ ಸಚಿವರ ಗಮನಕ್ಕೆ ತಂದರು.
ಉಭಯ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಿಂದ ಕೆಂಪು ಕಲ್ಲು ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಪರವಾನಿಗೆ ಹೊಂದಿರುವವರು ಗಣಿಕಾರಿಕೆ ನಡೆಸುತ್ತಿದ್ದರೂ ಈ ಹಿಂದೆ ಇದ್ದ ರೋಯಲ್ಟಿ ಟ್ಯಾಕ್ಸನ್ನು 256 ₹ ಗೆ ಏರಿಕೆ ಮಾಡಲಾಗಿದೆ. ಕೆಂಪು ಕಲ್ಲು ಗಣಿಗಾರಿಕೆಗೆ ನಿರ್ಬಂಧ ವಿಧಿಸಿರುವ ಕಾರಣ ಉಭಯ ಜಿಲ್ಲೆಗಳಲ್ಲಿ ತೀವ್ರತರದ ಸಮಸ್ಯೆ ಸೃಷ್ಟಿಯಾಗಿದೆ. ಮನೆ ಕಟ್ಟುವಲ್ಲಿ ಕೆಂಪು ಕಲ್ಲು ಅಗತ್ಯವಾಗಿ ಬೇಕಾಗಿದ್ದು. ಗಣಿಕಾರಿಕೆ ನಿಂತಿರುವ ಕಾರಣ ಜಿಲ್ಲೆಯ ನೂರಾರು ಕಾರ್ಮಿಕರು, ಗಾರೆ ಕಾರ್ಮಿಕರಿಗೆ ಸಂಕಷ್ಟ ಉಂಟಾಗಿದೆ. ಸರಕಾರದ ಈ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಕೈಗೊಂಡು ಉಂಟಾಗಿರುವ ತೊಂದರೆಯನ್ನು ಪರಿಹರಿಸಬೇಕು ಎಂದು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

ಈಗಾಗಲೇ ರೋಯಲ್ಟಿ ಟ್ಯಾಕ್ಸ್ 256 ರೂಗೆ ಏರಿಸಲಾಗಿದೆ. ಈ ಹಿಂದೆ ಇದ್ದ 74 ರೂ ರಾಯಲ್ಟಿ ಟ್ಯಾಕ್ಸ್ ಬದಲಾಗಿದೆ ಅದನ್ನು 100 ಗೆ ಸೀಮಿತಗೊಳಿಸಬೇಕು ಮತ್ತು ಪರವಾನಿಗೆ ಅವಧಿಯನ್ನು ಒಂದು ವರ್ಷದ ಬದಲಾಗಿ ಎರಡು ವರ್ಷಕ್ಕೆ ಏರಿಸಬೇಕು ಎಂದು ಶಾಸಕ ಅಶೋಕ್ ರೈ ಬೇಡಿಕೆ ಸಲ್ಲಿಸಿದ್ದಾರೆ.

ಶಾಸಕ ಅಶೋಕ್ ರೈ ಬೇಡಿಕೆಗೆ ಸ್ಪಂದಿಸಿದ‌ಸಚಿವರು ಕ್ಯಾಬಿನೆಟ್ ಸಭೆಯಲ್ಲಿ ಬೇಡಿಕೆಯನ್ನು ಮಂಜೂರು ಮಾಡುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಶಾಸಕ ರೈ ತಿಳಿಸಿದ್ದಾರೆ.

ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ‌ ಜಿಲ್ಲೆಯ ಜನತೆ,ಕಾರ್ಮಿಕರು,ಗಾರೆ ಕೆಲಸದವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಎಲ್ಲಾ ವಿಚಾರಗಳನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ಖಂಡಿತವಾಗಿಯೂ ಸಮಸ್ಯೆ‌ಪರಿಹಾರ ಆಗಲಿದೆ ಎಂಬ ಪೂರ್ಣ ವಿಶ್ವಾಸ ಇದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678