canaratvnews

*ಬಿಹಾರದಲ್ಲಿ 50ಲಕ್ಷ ವೋಟು ಡಿಲಿಟ್ ಮಾಡಿದ್ದಾರೆ. ಎಸ್‌ಐಆರ್  ಬಳಿಕ ವೋಟು  ಖಾತ್ರಿಪಡಿಸಿ:ಶಾಸಕ ಅಶೋಕ್ ರೈ*

ಪುತ್ತೂರು: ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ, ಆದರೂ ಕೆಲವು ಕಡೆಗಳಲ್ಲಿ ಬಿಎಲ್‌ಒಗಳು ಮತದಾರ ಪಟ್ಟಿ ಮ್ಯಾಪಿಂಗ್ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮ್ಯಾಪಿಂಗ್ ಬಳಿಕ ನಿಮ್ಮ ನಿಮ್ಮ ವೋಟರ್ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಇದೆಯೇ ಎಂದು ಖಾತ್ರಿಪಡಿಸಿ ಇಲ್ಲದಿದ್ದರೆ ನೀವು ಮತದಾನದಿಂದ ವಂಚತರಾಗುವ ಸಾಧ್ಯತೆ ಇದೆ ಈಗಾಗಲೇ ಬಿಹಾರದಲ್ಲಿ ೫೦ ಲಕ್ಷ ವೋಟು ಡಿಲಿಟ್ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.


ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮತದಾರ ಪಟ್ಟಿ ಪರಿಷ್ಕರಣೆಯ ಕುರಿತು ಬಿಎಲ್‌ಎಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮ್ಯಾಪಿಂಗ್ ಬಗ್ಗೆ ಈಗಾಗಲೇ ಕೆಲವೊಂದು ಆಕ್ಷೇಪಾರ್ಹ ದೂರುಗಳು ಬಂದಿದೆ. ವಿದೇಶದಲ್ಲಿರುವ ಅಥವಾ ಕ್ಷೇತ್ರ ಬಿಟ್ಟು ಹೊರಗಡೆ ನೆಲೆಸಿರುವ ಕುಟುಂಬಗಳ ವೋಟು ಡಿಲಿಟ್ ಮಾಡುವ ಸಾಧ್ಯತೆ ಇದೆ. ಕಾರ್ಯಕರ್ತರು, ಬಿಎಲ್‌ಎಗಳು ಈಬಗ್ಗೆ ಅಧಿಕಾರಿಗಳಿಗೆ ಸೂಕ್ತ ದಾಖಲೆ, ಮಾಹಿತಿ ನೀಡುವ ಮೂಲಕ ಮತದಾರ ಪಟ್ಟಿಯಿಂದ ಹೆಸರು ಅಳಿಸದಂತೆ ನೋಡಿಕೊಳ್ಳಬೇಕು. ನನ್ನದು ಸರಿ ಇದೆ ಎಂದು ಕೈಕಟ್ಟಿ ಕೂರಬೇಡಿ. ನಾಡಿದ್ದು ವೋಟು ಹಾಕ್ಲಿಕ್ಕೆ ಹೋಗುವಾಗ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಆ ವೇಳೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕದಲ್ಲಿ ಎಸ್‌ಐಆರ್ ಗೆ ಅಧಿಕೃತ ಆದೇಶ ಬಂದ ಬಳಿಕ ಆನ್‌ಲೈನ್ ಮೂಲಕವೂ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶಾಸಕರು ಹೇಳಿದರು. ಮತದಾರ ಪಟ್ಟಿಯಿಂದ ಹೆಸರು ಅಳಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನೂ ಶಾಸಕರು ವಿವರಿಸಿದರು. ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.

Share News
Exit mobile version