• Home  
  • *ಬೆಳೆವಿಮೆಯನ್ನೇ ನಂಬಿದ್ದ ಅಡಿಕೆ ಕೃಷಿಕರು ಆತಂಕದಲ್ಲಿದ್ದಾರೆ ಪರಿಹಾರ ಮೊತ್ತವನ್ನು ಸಮರ್ಪಕವಾಗಿ ವಿತರಿಸಿ: ಸದನದಲ್ಲಿ ಶಾಸಕ ಅಶೋಕ್ ರೈ*
- DAKSHINA KANNADA - HOME - STATE

*ಬೆಳೆವಿಮೆಯನ್ನೇ ನಂಬಿದ್ದ ಅಡಿಕೆ ಕೃಷಿಕರು ಆತಂಕದಲ್ಲಿದ್ದಾರೆ ಪರಿಹಾರ ಮೊತ್ತವನ್ನು ಸಮರ್ಪಕವಾಗಿ ವಿತರಿಸಿ: ಸದನದಲ್ಲಿ ಶಾಸಕ ಅಶೋಕ್ ರೈ*

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ನೀಡುವಲ್ಲಿ ಲೋಪವಾಗಿದೆ, ಈ ಲೋಪವನ್ನು ಸರಿಪಡಿಸಿ ವಿಮಾ ಮೊತ್ತವನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಇಲ್ಲವಾದರೆ ಕರಾವಳಿ ಜಿಲ್ಲೆಯ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಮತ್ತು ಈ ವಿಚಾರದಲ್ಲಿ ಕೃಷಿಕರು ಆತಂಕದಲ್ಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭಾ ಅಧಿವೇಶನದಲ್ಲಿ ಅಡಿಕೆ ಕೃಷಿಕರ ಪರವಾಗಿ ಧ್ವನಿ ಎತ್ತಿದ್ದಾರೆ.


ಶುಕ್ರವಾರ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ಮೊನ್ನೆಯ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ಕರಾವಳಿ ಭಾಗದ ಶಾಸಕರನ್ನು ಕರೆಸಿ ತೋಟಗಾರಿಕಾ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದೆ ಆಪ್ರಕಾರ ಇದರ ಬಗ್ಗೆ ಚರ್ಚೆಯಗಲಿ. ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿರುವ ದ ಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಗೆ ಈ ಬಾರಿ ಅಡಿಕೆಗೆ ರೋಗಭಾದಿಸಿದ ಕಾರಣ ನಷ್ಟ ಅನುಭವಿಸುವಂತಾಗಿದೆ. ಬೆಳೆ ವಿಮೆಯನ್ನು ನಂಬಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಕೆಲವರಿಗೆ ಅತ್ಯಂತ ಕಡಿಮೆ ವಿಮೆ ಮಂಜೂರಾಗಿದೆ ಅದನ್ನು ಸರಿಪಡಿಸಿ ಸರಿಯಾದ ಪ್ರಮಾಣದಲ್ಲಿ ವಿಮಾ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಅಡಿಕೆಯನ್ನು ತೋಟಗಾರಿಕಾ ಬೆಳೆಗೆ ಸೇರಿಸಬೇಕು
ಕರ್ನಾಟಕದ ಮನವಿಯನ್ನು ಕೇಂದ್ರ ತಿರಸ್ಕಾರ ಮಾಡಿದ.

ಅಡಿಕೆಯನ್ನು ತೋಟಗಾರಿಕಾ ಬೆಳೆಯಾಗಿ ಸೇರ್ಪಡೆಮಾಡಬೇಕಿದೆ. ಕರ್ನಾಟಕದಿಂದ ಈ ಹಿಂದೆ ಮೂರು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಕೇಂದ್ರ ಸರಕಾರ ಅಡಿಕೆಯನ್ನು ವಾಣಿಜ್ಯ ಬೆಳೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ.ನಮ್ಮ ಕರ್ನಾಟಕದವರೇ ಕೇಂದ್ರ ಕೃಷಿ ಮಂತ್ರಿಯಾಗಿರುವಾಗ ಅಡಿಕೆಯನ್ನು ತೋಟಗಾರಿಕಾ ಬೆಳೆ ಪಟ್ಟಿಗೆ ಸೇರಿಸುವ ಕೆಲಸವನ್ನು ಅವರು ಮಾಡಬೇಕು. ಕರ್ನಾಟಕ ಸರಕಾರ ಕಳುಹಿಸಿರುವ ವರದಿಯನ್ನು ಜಾರಿ ಮಾಡಲು ಕೇಂದ್ರ ಸರಕಾರಕ್ಕೆ ಒತ್ತಡ ತರುವ ಕೆಲಸವನ್ನು ಕೇಂದ್ರ ಕೃಷಿ ಸಚಿವರು ಮಾಡಬೇಕು. ಈ ಭಾಗದ ಜನಪ್ರತಿನಿಧಿಗಳೂ ಒತ್ತಡವನ್ನು ತರುವ ಕೆಲಸ ಮಾಡಬೇಕು ಎಂದು ಸದನದಲ್ಲಿ ಶಾಸಕರು ಆಗ್ರಹಿಸಿದರು.

Share News