• Home  
  • ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ.ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಾಸಕ ಅಶೋಕ್ ರೈ ಮನವಿ
- DAKSHINA KANNADA - HOME

ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ.ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಸರಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ಕೇಂದ್ರ ಅಥವಾ ದೇವರ ಹೆಸರಿನಲ್ಲಿ ಸಕ್ರಮೀಕರಣ ಮಾಡುವ ಬಗ್ಗೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರ ಜೊತೆ ಶಾಸಕ ಅಶೋಕ್ ರೈ ಶುಕ್ರವಾರ ಮಾತುಕತೆ ನಡೆಸಿದ್ದು , ಈ ವಿಚಾರದಲ್ಲಿ ಮೊದಲ ಹೆಜ್ಜೆ ಎಂಬಂತೆ ಆರು ಧಾರ್ಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಸಕ್ರಮೀಕರಣ ಮಾಡುವುದಾಗಿ ಸಚಿವರು ಒಪ್ಪಿಕೊಂಡಿದ್ದು , ಇದಾದ ಬಳಿಕ ಎಲ್ಲಾ ಧಾರ್ಮಿಕ ಕೇಂದ್ರಗಳೂ ಸಕ್ರಮಗೊಳ್ಳಲಿದೆ.

ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ , ಮಸೀದಿ, ಚರ್ಚ್, ಬಸದಿಗಳು ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳು ಈ ವ್ಯಾಪ್ತಿಯಲ್ಲಿ ಒಳಪಡುತ್ತದೆ.

ಎಷ್ಟೋ ವರ್ಷಗಳಿಂದ ನಿರ್ಮಾಣವಾದ ಈ ಧಾರ್ಮಿಕ ಕೇಂದ್ರಗಳು ಇಂದಿಗೂ ಸರಕಾರಿ ಜಾಗದಲ್ಲೇ ಇದೆ. ದೇವರ ಅಥವಾ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಇನ್ನೂ ಪಹಣಿ ಪತ್ರದಲ್ಲಿ ದಾಖಲಾಗಿದ್ದ. ಪಹಣಿ ಪತ್ರದಲ್ಲಿ ಸರಕಾರಿ ಜಾಗ ಎಂದೇ ನಮೂದಾಗಿದೆ. ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳು ಮುಂದಿನ ದಿನಗಳಲ್ಲಿಯೂ ಅದೇ ಸ್ಥಳದಲ್ಲಿ ಇರುವ ಕಾರಣ ಕೇಂದ್ರಗಳಿರುವ ಆ ಜಾಗವನ್ನು ದೇವರ ಅಥವಾ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಮಾಡಬೇಕು ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದರು. ಶಾಸಕರ ಮನವಿಗೆ ಪೂರಕ ಎಂಬಂತೆ ಇದೀಗ ಧಾರ್ಮಿಕ ಕೇಂದ್ರಗಳ ಸಕ್ರಮೀಕರಣಕ್ಕೆ ಸರಕಾರ ಮುಂದಾಗಿದೆ.

ಚುನಾವಣೇ ಸಮಯದಲ್ಲಿ ನಾನು ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡುವುದಾಗಿ ಮಾತು ಕೊಟ್ಟಿದ್ದೆ, ಆ ಮಾತನ್ನು ಖಂಡಿತವಾಗಿಯೂ ಉಳಿಸುವ ಕೆಲಸವನ್ನು ಮಾಡುತ್ತೇನೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಕೇದ್ರಗಳ ಹೆಸರಿಗೆ ಮಾಡಿಸಬೇಕಾದ ಅಗತ್ಯವಿದೆ. ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ದಾಖಲೆ ಇಲ್ಲದ ಕಾರಣ ಸರಕಾರದಿಂದ ಅನುದಾನ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಧಾರ್ಮಿಕ ಕೇಂದ್ರಗಳನ್ನು ಸರಕಾರ ಸಕ್ರಮ ಮಾಡಿದರೆ ಅವುಗಳನ್ನು ಅಭಿವೃದ್ದಿಪಡಿಸಲು ಸುಲಭವಾಗಲಿದೆ. ಕೊಟ್ಟ ಮಾತಿನಂತೆ ನನ್ನ ಕ್ಷೇತ್ರದಲ್ಲಿರುವ ಸರಕಾರಿ ಜಾಗದಲ್ಲಿ ನಿರ್ಮಾಣವಾದ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಿಯೇ ಸಿದ್ದ ಶಾಸಕ ಅಶೋಕ್ ರೈ ತಿಳಿಸಿದ್ದಾರೆ

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678