canaratvnews

ದೀಪಾವಳಿ ಸಂಭ್ರಮದಲ್ಲಿ ಜನಮನ ಗೆದ್ದ ‘ಅಶೋಕ ಜನಮನ’ – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಉದ್ಯಮಿ ಅಶೋಕ್‌ ಕುಮಾ‌ರ್ ರೈ ನೇತೃತ್ವದ ‘ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ದೀಪಾವಳಿ ಸಂಭ್ರಮದ ಅಂಗವಾಗಿ ಅಕ್ಟೋಬರ್ 20ರಂದು ಸೋಮವಾರ ನಡೆದ ‘ಅಶೋಕ ಜನಮನ’ ವಸ್ತ್ರ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು

.ಅಶೋಕ್ ರೈಯವರು ಮಾಡುವ ಕೆಲಸ ಎಲ್ಲರಿಗೂ ಮಾದರಿ :

“ಅನ್ನಭಾಗ್ಯ ಯೋಜನೆ ಮಾಡಿದ್ದು ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ. ದುಡ್ಡಿಲ್ಲ ಎನ್ನುತ್ತಿದ್ದರೂ ಸರ್ಕಾರ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿಲ್ಲ. ಅಶೋಕ್‌ ರೈಯವರ ಕಾರ್ಯನಿಷ್ಠೆ, ಧಾರ್ಮಿಕತೆ, ದಾನಶೀಲತೆ ಎಲ್ಲರಿಗೂ ಮಾದರಿ. ಅವರ ಒತ್ತಡಕ್ಕೆ ಮಣಿದು ನಾನು ಹಬ್ಬ ಬಿಟ್ಟು ಇಲ್ಲಿಗೆ ಬಂದಿದ್ದೇನೆ” ಎಂದು ಸಿಎಂ ಹಾಸ್ಯಭರಿತವಾಗಿ ಹೇಳಿದರು.

ಜನಮನ ಗೆದ್ದ ‘ಅಶೋಕ ಜನಮನ’ :

ಸಿದ್ದರಾಮಯ್ಯರವರು ಮುಂದಿನ ಚುನಾವಣೆಯಲ್ಲೂ ಪುತ್ತೂರು ಸೇರಿದಂತೆ ಎಂಟೂ ಕ್ಷೇತ್ರಗಳಲ್ಲಿ ಜನರು ಆಶೀರ್ವಾದ ನೀಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಜೇನು ಕಚ್ಚಿ ಮೃತಪಟ್ಟ ಮಗುವಿನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 75 ಲಕ್ಷ ನೀಡುವುದಾಗಿ ಘೋಷಿಸಿದರು.

“ಸ್ವಾತಂತ್ರ್ಯ, ಸಮಾನತೆ, ಭಾತೃತ್ವ – ಈ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸಮಾಜ ಸುಂದರವಾಗುತ್ತದೆ. ಅಶೋಕ್ ರೈ ಹಾಗೂ ಅವರ ಕುಟುಂಬ ವರ್ಗದವರಿಗೆ ಒಳಿತಾಗಲಿ,” ಎಂದು ಸಿದ್ದರಾಮಯ್ಯ ತಮ್ಮ ಭಾಷಣವನ್ನು ಸಮಾಪಿಸಿದರು.

Share News
Exit mobile version