canaratvnews

ವಿಟ್ಲ‌ ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ,ಸಿಬಂದಿ ಕೊರತೆ ಪರಿಹರಿಸಿ: ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬಂದಿ,ವೈದ್ಯರ ಕೊರತೆ ಇದ್ದು ಅದನ್ನು ತಕ್ಷಣ ಪರಿಹರಿಸುವಂತೆ ಆರೋಗ್ಯ‌ಸಚಿವ ದಿನೇಶ್ ಗುಂಡೂರಾವ್ ಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ವಿಟ್ಲ ಸಮುದಾಯ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಅಲ್ಲಿ ವೈದ್ಯರ ಕೊರತೆಯಿಂದ ಜನರಿಗೆ ಸಂಕಷ್ಟ ಉಂಟಾಗಿದೆ. ವಿಟ್ಲದಲ್ಲಿ ಬೇರೆ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ತುರ್ತು‌ಸಂಧರ್ಭದಲ್ಲಿ ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ,ಜೊತೆಗೆ ಸಿಬಂದಿಗಳ ಕೊರತೆಯೂ ಇದೆ. ತಕ್ಷಣ ಈ ಬಗ್ಗೆ ಮುತುವರ್ಜಿ ವಹಿಸಿ ಪರಿಹರಿಸುವಂತೆ ಮನವಿ ಮಾಡಿದರು.

ಡಯಾಲಿಸಿಸ್ ಕೇಂದ್ರಕ್ಕೆ ಮನವಿ:
ವಿಟ್ಲ‌ಸಮುದಾಯ ಕೇಂದ್ರ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು ಸೌಲಭ್ಯಗಳ ಕೊರತೆ ಮಾತ್ರ ಇದೆ. ಈ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಪ್ರಾರಂಭ ಮಾಡುವಂತೆಯೂ ಸಚಿವರಿಗೆ ಶಾಸಕರು‌ಮನವಿ ಮಾಡಿದರು. ಶಾಸಕರ ಮನವಿಗೆ ಸಚಿವರು ಸ್ಪಂದಿಸಿದ್ದು ಶೀಘ್ರ ಕ್ರಮಕ್ಕೆ ಸೂಚನೆಯನ್ನು ನೀಡಿದ್ದಾರೆ.

Share News
Exit mobile version