canaratvnews

ಪುತ್ತೂರಿಗೆ ಕಾರ್ಮಿಕ ವಸತಿಶಾಲೆ ಮಂಜೂರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವರಿಗೆ ಅಭಿನಂದನೆ. ಪುತ್ತೂರು ಶಾಸಕರು ಅಶೋಕ್ ರೈ

ದ‌ಕ‌ ಜಿಲ್ಲೆಯ ಕಾರ್ಮಿಕ ವಸತಿ ಶಾಲೆಯನ್ನು ಸರಕಾರ ಪುತ್ತೂರಿಗೆ ಮಂಜೂರು ಮಾಡಿದೆ.‌ ಕಾರ್ಮಿಕ ವಸತಿ ಶಾಲೆಯನ್ನು ಪುತ್ತೂರಿಗೆ ನೀಡುವಂತೆ ಕಾರ್ಮಿಕ ಸಚಿವರಿಗೆ ಮನವಿಯನ್ನು ಮಾಡಿದ್ದೆ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಕುರಿಯ ಗ್ರಾಮದಲ್ಲಿ 15 ಎಕ್ರೆ ಜಾಗವನ್ನು ಮೀಸಲಿರಿಸಿದ್ದೆ. ಪುತ್ತೂರಿಗೆ ಮಂಜೂರಾದ ಕಾರ್ಮಿಕರ ವಸತಿ ಶಾಲೆಯಲ್ಲಿ ಒಂದರಿಂದ 12 ನೇ ತರಗತಿ ತನಕ ವ್ಯಾಸಂಗ ಮಾಡಲಾಗುತ್ತದೆ. ಕಾರ್ಮಿಕರ ಮಕ್ಕಳಿಗೆಂದೇ ಈ ವಸತಿ ಶಾಲೆ ನಿರ್ಮಾಣವಾಗಲಿದೆ

. ಬಡ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ನೀಡಿದ ಮಹತ್ತರ ಯೋಜನೆ ಇದಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀಯೊಬ್ಬ ಕಾರ್ಮಿಕರ ಮಕ್ಕಳೂ ಇದನ್ನು ಬಳಸಿಕೊಳ್ಳಬೇಕು.ಸುಮಾರು 1000 ಮಂದಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಲಿದ್ದಾರೆ. ಜಿಲ್ಲೆಯಲ್ಲೇ ಅತಿ ದೊಡ್ಡ ವಸತಿ ಶಾಲೆ ಇದಾಗಿದೆ. ಪುತ್ತೂರು ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ದಿ ಯೋಜನೆಗಳು ಮುಂದೆ ಬರಲಿದೆ.

ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆ ಮಂಜೂರು‌ಮಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಇದು ಪುತ್ತೂರಿನ ಇತಿಹಾಸ ಪುಟದಲ್ಲಿ ದಾಖಲಾಗಲಿದೆ. ಎಂದು ಪುತ್ತೂರು ಶಾಸಕ ಅಶೋಕ ರೈ ಹೇಳಿದರು

Share News
Exit mobile version