• Home  
  • ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ
- DAKSHINA KANNADA - HOME

ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು ಸೆ.10: ಬೆಳ್ಮಣ್ ಎಂಸಿಸಿ ಬ್ಯಾಂಕ್ ಶಾಖೆ ವತಿಯಿಂದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ಶಿಕ್ಷಕರ ದಿನಾಚರಣೆಯನ್ನು ಡಾ| ಸರ್ವಪಲ್ಲಿ ರಾಧಾಕೃಷ್ಜನ್ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಚಾಲನೆ ನೀಡಿದರು

ಕಾರ್ಯಕ್ರಮದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು, ಹೊಸದಾಗಿ ಸ್ಥಾಪನೆಯಾದ, ಬೆಳ್ಮಣ್ ಶಾಖೆಯು ಕೇವಲ ಆರು ತಿಂಗಳಲ್ಲಿ ₹ 6 ಕೋಟಿಗೂ ಮೀರಿದ ವಹಿವಾಟು ಸಾಧಿಸಿದೆ ಎಂದು ಹೇಳಿ, ಇದು ಸ್ಥಳೀಯ ಸಮುದಾಯದ ಬಲವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ದೂರದೃಷ್ಟಿಯ ಮಹತ್ವವನ್ನು ಒತ್ತಿ ಹೇಳಿದ ಅವರು ಇಂದು ಶಿಕ್ಷಕರು ಎದುರಿಸುತ್ತಿರುವ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಪ್ರೀತಿ ಮತ್ತು ಸಮರ್ಪಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲು ಶಿಕ್ಷಕರನ್ನು ಪ್ರೋತ್ಸಾಹಿಸುತ್ತಾ, ಹಾಜರಿದ್ದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಫಾದರ್ ಮಿಲ್ಟನ್ ಫೆರ್ನಾಂಡಿಸ್ ಅವರು ತಮ್ಮ ಭಾಷಣದಲ್ಲಿ, ಶಿಕ್ಷಕರನ್ನು ಗೌರವಿಸಲು ಬ್ಯಾಂಕ್ ಮತ್ತು ಇದರ ಸಿಬ್ಬಂದಿ ತೆಗೆದುಕೊಂಡ ಉಪಕ್ರಮವನ್ನು ಶ್ಲಾಘಿಸಿದರು. ಶಿಕ್ಷಕರಿಗೆ ನೀಡಿದ ಮನ್ನಣೆಗೆ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ಮತ್ತೊಬ್ಬ ಅತಿಥಿ ಶ್ರೀಮತಿ ಲಿಡ್ವಿನ್ ಅರಾನ್ಹಾ ಕೂಡ ಬ್ಯಾಂಕಿನ ಚಿಂತನಶೀಲ ಕಾರ್ಯವನ್ನು ಶ್ಲಾಘಿಸಿದರು. ಬೆಳ್ಮಣ್ ಪ್ರದೇಶದ ವಿವಿಧ ಸಂಸ್ಥೆಗಳ ಶಿಕ್ಷಕರನ್ನು ಒಟ್ಟುಗೂಡಿಸುವಲ್ಲಿ ಸಿಬ್ಬಂದಿ ಮಾಡಿದ ಶ್ಲಾಘನೀಯ ಕಾರ್ಯಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.

2018–19ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಲಿಡಿಯಾ ಅರಾನ್ಹಾ ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್ ಅವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು. ಒಟ್ಟು 60 ಶಿಕ್ಷಕರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು,

ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ ಅರಾನ್ಹಾ, ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್ ಅವರು ಗೌರವ ಅತಿಥಿಗಳಾಗಿದ್ದರು. ನಿರ್ದೇಶಕರಾದ ಶ್ರೀ ಎಲ್ರಾಯ್ ಕೆ. ಕ್ರಾಸ್ಟೊ, ಡಾ| ಜೆರಾಲ್ಡ್ ಪಿಂಟೊ, ಶಿಕ್ಷಕರು ಮತ್ತು ಗಣ್ಯರು ಸೇರಿದಂತೆ ಅತಿಥಿಗಳು ಸುಸಂಘಟಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು,

ನಿರ್ದೇಶಕರಾದ ಶ್ರೀ ಆಂಡ್ರ‍್ಯೂ ಡಿಸೋಜಾ ಸ್ವಾಗತಿಸಿದರು. ಕಾರ್ಯಕ್ರಮವು ಸಿಬ್ಬಂದಿ ನಡೆಸಿದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಸಿಬ್ಬಂದಿ ಶ್ರೀ ರಿತೇಶ್ ಡಿಸೋಜಾ ನಿರೂಪಿಸಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶೈನಿ ಲಸ್ರಾದೊ ವಂದಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678