• Home  
  • ಪವಿತ್ರ ಗುರುವಾರ: ಪಾದ ತೊಳೆದು ಕ್ರಿಸ್ತನ ಸಂದೇಶ ಸಾರಿದ ಮಂಗಳೂರು ಬಿಷಪ್‌
- COMMUNITY NEWS - DAKSHINA KANNADA - HOME - LATEST NEWS

ಪವಿತ್ರ ಗುರುವಾರ: ಪಾದ ತೊಳೆದು ಕ್ರಿಸ್ತನ ಸಂದೇಶ ಸಾರಿದ ಮಂಗಳೂರು ಬಿಷಪ್‌

ಮಂಗಳೂರು: ಯೇಸು ಸ್ವಾಮಿಯು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೆ)ಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು. ನಗರ ಹೊರವಲಯದ ಮುಕ್ಕ ಪವಿತ್ರಾತ್ಮರ ಚರ್ಚ್‌ನಲ್ಲಿ ಮಹಿಳೆ ಹಾಗೂ ಪುರುಷ ಪ್ರೇಷಿತರ ಪಾದಗಳನ್ನು ತೊಳೆದು ಯೇಸು ಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶ ನೀಡಿದರು. ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ್ದ ಫಾದರ್‌ ಮುಲ್ಲರ್‌ ಸಂಸ್ಥೆಯ ಆಡಳಿತ ಮಂಡಳಿಯ ಸಹಾಯಕ […]

Share News

ಮಂಗಳೂರು: ಯೇಸು ಸ್ವಾಮಿಯು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೆ)ಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು. ನಗರ ಹೊರವಲಯದ ಮುಕ್ಕ ಪವಿತ್ರಾತ್ಮರ ಚರ್ಚ್‌ನಲ್ಲಿ ಮಹಿಳೆ ಹಾಗೂ ಪುರುಷ ಪ್ರೇಷಿತರ ಪಾದಗಳನ್ನು ತೊಳೆದು ಯೇಸು ಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶ ನೀಡಿದರು.

ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ್ದ ಫಾದರ್‌ ಮುಲ್ಲರ್‌ ಸಂಸ್ಥೆಯ ಆಡಳಿತ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ವಂದನೀಯ ವಿಲಿಯಂ ಡಿಸೋಜಾ ಅವರು  ಶುಭ ಸಂದೇಶ ನೀಡಿ, ಏಸುಕ್ರಿಸ್ತರ ಕೊನೆಯ ಭೋಜನ ಹಾಗೂ ಶಿಷ್ಯರ ಪಾದ ತೊಳೆದ ಮಹತ್ವ ವಿವರಿಸಿ ಯೇಸುಕ್ರಿಸ್ತರಂತೆ ಬದುಕಲು ಪ್ರಯತ್ನಿಸಿ ಎಂದರು. ಇದೇ ವೇಳೆ ಕ್ರೈಸ್ತ ಧರ್ಮಪಾದ್ರಿಗಳ ತ್ಯಾಗ ಹಾಗೂ ಸೇವೆಯನ್ನು ನೆನಪಿಸಿ ಅವರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.

ಪವಿತ್ರ ಗುರುವಾರದಂದು ಏಸುಕ್ರಿಸ್ತರು ತನ್ನ ಕೊನೆಯ ಭೋಜನದ ವೇಳೆ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ಸೇವೆಯ ಸಂಸ್ಕಾರವನ್ನು ಪ್ರಕಟಿಸಿದ್ದು, ಅದರ ಪ್ರಕಾರ ಎಲ್ಲ ಚರ್ಚುಗಳಲ್ಲಿ ಪದ್ದತಿಯನ್ನು ನಡೆಸಿಕೊಂಡು ಬರಲಾಗುತ್ತದೆ. ಪವಿತ್ರ ಗುರುವಾರದ ಬಳಿಕದ ಶುಕ್ರವಾರ ಯೇಸುಸ್ವಾಮಿಯನ್ನು ಕಲ್ವಾರಿ ಬೆಟ್ಟದಲ್ಲಿ ಶಿಲುಬೆಗೇರಿಸಲಾಯಿತು. ಶುಕ್ರವಾರವನ್ನು ಜಗತ್ತಿನ ಕ್ರೆಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಇಡೀ ದಿನವನ್ನು ಧ್ಯಾನ ಹಾಗೂ ಉಪವಾಸಗಳಲ್ಲಿ ಕಳೆಯುತ್ತಾರೆ.

 

ಪೆರುವಾಯಿ ಫಾತಿಮಾ ಮಾತಾ ದೇವಾಲಯದಲ್ಲಿ ಧರ್ಮಗುರು ವಂದನೀಯ ಸೈಮನ್‌ ಡಿಸೋಜಾ ಅವರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆದು ಮುತ್ತಿಡುವ ಮೂಲಕ ಯೇಸು ಸ್ವಾಮಿಯ ಸಂದೇಶ ನೀಡಿದರು.

Share News