ಮಂಗಳೂರು, ಜೂ.1: ಕೆ ಎಸ್ ಆರ್ ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಕಾರಿಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದು ಯುವಕ ಮೃತಪಟ್ಟಿರುವ ಘಟನೆ ಮಂಜೇಶ್ವರ ಬಳಿ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ಭಾರೀ ಮಳೆಯ ವೇಳೆ ಅಪಘಾತ ಸಂಭವಿಸಿದೆ. ಕೆಲ್ವಿನ್ ಡಿಸೋಜಾ(18) ಮೃತಪಟ್ಟ ಯುವಕ. ಕಾರಿನ ಹಿಂಬದಿಯಲ್ಲಿದ್ದ ಹಿನ್ನೆಲೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಚಿಕಿತ್ಸೆಗೆ ಸ್ಪಂದಿಆದೆ ಮೃತಪಟ್ಟಿದ್ದಾನೆ.

ಮೇ 30ರಂದು ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವರ್ಕಾಡಿ ತೋಕೆ ನಿವಾಸಿಗಳಾದ ಕೆಲ್ವಿನ್ ಡಿಸೋಜ (18), ಪ್ರಜ್ವಲ್ (24), ಪ್ರೀತಂ (19) ಗಾಯಗೊಂಡಿದ್ದರು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ ಕೆಲ್ವಿನ್ ಡಿ ಸೋಜಾ ಜೂ.1ರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಮೃತ ಕೆಲ್ವಿನ್ ವರ್ಕಾಡಿಯ ತೋಕೆ ನಿವಾಸಿ ಸಿಪ್ರಿಯನ್ ಡಿ ಸೋಜಾ ಅವರ ಪುತ್ರ.
ಭಾರೀ ಮಳೆಯಿಂದಾಗಿ ಮಂಜೇಶ್ವರದೆಲ್ಲೆಡೆ ಜಲಾವೃತಗೊಂಡಿತ್ತು. ಅಂಡರ್ ಪಾಸ್ ಗಳು ನೀರಿನಿಂದ ಆವೃತಗೊಂಡಿತ್ತು. ಸರ್ವಿಸ್ ರಸ್ತೆಗಳಲ್ಲಿ ನೀರೇ ಹರಿಯುತ್ತಿತ್ತು. ಇದರಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕೆಲ್ವಿನ್ ಸಂಚರಿಸುವ ಕಾರು ಕೂಡ ಮಳೆ ನೀರಿನ ಹಿನ್ನೆಲೆ ನಿಧಾನವಾಗಿ ತೆರಳುತ್ತಿತ್ತು. ಆದರೆ ಹಿಂಬದಿಯಿಂದ ವೇಗವಾಗಿ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ.