• Home  
  • ಡ್ಯೂಟಿಯಲ್ಲಿದ್ದ ಮಂಗಳೂರು ಟ್ರಾಫಿಕ್‌ ಪೊಲೀಸರ ಬೈಕ್‌ ಕಳ್ಳತನ: ಅರ್ಧ ಗಂಟೆಯ ಕೈಚಳಕ
- DAKSHINA KANNADA - HOME - LATEST NEWS

ಡ್ಯೂಟಿಯಲ್ಲಿದ್ದ ಮಂಗಳೂರು ಟ್ರಾಫಿಕ್‌ ಪೊಲೀಸರ ಬೈಕ್‌ ಕಳ್ಳತನ: ಅರ್ಧ ಗಂಟೆಯ ಕೈಚಳಕ

ಮಂಗಳೂರು: ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರೊಬ್ಬರು ಪಾರ್ಕ್‌ ಮಾಡಿದ ಅರ್ಧಗಂಟೆಯೊಳಗೆ ಬೈಕು ಕಳವು ನಡೆಸಿದ ಬಗ್ಗೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಪುನೀತ್‌ ಬಿ.ವೈ ಎಂಬುವವರು ಮಂಗಳೂರು ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಜ.5 ರಂದು ಮಂಗಳೂರು ಕೆ.ಬಿ.ಕಟ್ಟೆಯಲ್ಲಿ ಸಂಚಾರ ನಿಯಂತ್ರಣ  ಕರ್ತವ್ಯಕ್ಕೆ ನೇಮಿಸಿದಂತೆ ಸಂಜೆ 5:30 ಗಂಟೆಗೆ ತನ್ನ ತಂದೆಯ ಹೆಸರಿನಲ್ಲಿರುವ KA-13-EG 3008  ನೋಂದಣಿಯ ಹೋಂಡಾ ಶೈನ್‌ […]

Share News

ಮಂಗಳೂರು: ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರೊಬ್ಬರು ಪಾರ್ಕ್‌ ಮಾಡಿದ ಅರ್ಧಗಂಟೆಯೊಳಗೆ ಬೈಕು ಕಳವು ನಡೆಸಿದ ಬಗ್ಗೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ

ಪುನೀತ್‌ ಬಿ.ವೈ ಎಂಬುವವರು ಮಂಗಳೂರು ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಜ.5 ರಂದು ಮಂಗಳೂರು ಕೆ.ಬಿ.ಕಟ್ಟೆಯಲ್ಲಿ ಸಂಚಾರ ನಿಯಂತ್ರಣ  ಕರ್ತವ್ಯಕ್ಕೆ ನೇಮಿಸಿದಂತೆ ಸಂಜೆ 5:30 ಗಂಟೆಗೆ ತನ್ನ ತಂದೆಯ ಹೆಸರಿನಲ್ಲಿರುವ KA-13-EG 3008  ನೋಂದಣಿಯ ಹೋಂಡಾ ಶೈನ್‌ ಬೈಕ್‌ನಲ್ಲಿ ಹಾಜರಾಗಿದ್ದರು. ಪ್ರತಿನಿತ್ಯ ಪಾರ್ಕ್‌ ಮಾಡುವಂತೆ ಕೆ.ಬಿ ಕಟ್ಟೆಯ ಬಳಿಯಿರುವ  ಸುಲಭ ಶೌಚಾಲಯದ ಪೇ ಪಾರ್ಕಿಂಗ್ ಸ್ಥಳದಲ್ಲಿ ಮೋಟಾರ್ ಸೈಕಲನ್ನು ಪಾರ್ಕ್ ಮಾಡಿ ಕರ್ತವ್ಯಕ್ಕೆ ತೆರಳಿದ್ದರು. ಸುಮಾರು ಸಂಜೆ 6 ಗಂಟೆ ವೇಳೆಗೆ ಪುನೀತ್‌   ಅವರು ಬೈಕ್‌ ನೋಡಿದಾಗ  ಬೈಕ್‌ ಕಾಣೆಯಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವಾದ ಸ್ಕೂಟರಿನ  ವಿವರಗಳು ಈ ಕೆಳಗಿನಂತಿದೆ:

KA-13-EG 3008 ನೇ ನಂಬ್ರದ ಹೊಂಡಾ ಕಂಪೆನಿಯ ಹೋಂಡಾ ಶೈನ್ ಮೋಟಾರ್ ಸೈಕಲ್ ಮಾಡೆಲ್ 2015 ಅಂದಾಜು ಮೌಲ್ಯ ರೂ.

25,000/-( 25 ಸಾವಿರ ರೂಪಾಯಿಗಳು )

ಇಂಜಿನ್ ನಂಬ್ರ: JC65ET0157485

ಚಾಸಿಸ್ ನಂಬ್ರ ME4JC652JFT047189ಆಗಿರುತ್ತದೆ.   ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ KA-13-EG 3008 ಕಪ್ಪು  ಬಣ್ಣದ ಹೊಂಡಾ ಕಂಪೆನಿಯ ಹೋಂಡಾ ಶೈನ್ ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಲಾಗಿದೆ.

Share News