ಮಂಗಳೂರು: ಅಡಿಕೆ ವ್ಯಾಪಾರಿಯೊಬ್ಬ ಸಹಕಾರಿ ಸಂಘವೊಂದಕ್ಕೆ 29 ಲಕ್ಷ ರೂ. ಮೋಸ ಮಾಡಿದ ಬಗ್ಗೆ ಮಂಗಳೂರು ನಗರ ಹೊರವಲಯದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಸಂಸ್ಥೆಯು ಮಂಗಳೂರು ಮತ್ತು ಇತರ ಕಡೆಗಳಲ್ಲಿ ಅಡಿಕೆ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದೆ. ಆರೋಪಿ ಸತ್ಯನಾರಾಯಣ ರಾಮಚಂದ್ರ ಭಟ್ (55) ಎಂಬಾತ ಗುಜರಾತ್‌ನ ಅಹಮದಾಬಾದ್ ನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು,
2009ರಲ್ಲಿ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘದಿಂದ ಆರೋಪಿಯು 3,06,5565 ಮೌಲ್ಯದ ಅಡಿಕೆಯನ್ನು ಖರೀದಿಸಿದ್ದ. ಇದರಲ್ಲಿ 1,13,578 ರೂ. ಹಣವನ್ನು ಪಾವತಿಸಿದ್ದು, ಉಳಿದ 29,51,987 ರೂ. ಪಾವತಿಸದೆ ಸಂಸ್ಥೆಗೆ ವಂಚಿಸಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದೆ.
ಸದ್ಯ ಆರೋಪಿ ವಿರುದ್ಧ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.