• Home  
  • *ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಮಹಿಳಾ ವೈಭವ’ಕ್ಕೆ :ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಲಿ ಚಾಲನೆ*
- DAKSHINA KANNADA - HOME

*ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಮಹಿಳಾ ವೈಭವ’ಕ್ಕೆ :ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಲಿ ಚಾಲನೆ*

ಮಂಗಳೂರು: ಮಹಿಳೆಯರು ಸ್ವಸಹಾಯ ಗುಂಪು ರಚಿಸುವ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಸ್ವಾವಲಂಬನೆಯ ಜೀವನಕ್ಕೆ ಬೇಕಾದ ಸೂಕ್ತ ತರಬೇತಿ ಪಡೆಯಬೇಕಿದೆ. ಪ್ರಸಕ್ತ ಕಾಲಕ್ಕೆ ಅನುಕೂಲವಾಗುವ ಎಐ ‘ಕೌಶಲದ ಮಾಹಿತಿಯನ್ನು ಪಡೆದು ಜೀವನದಲ್ಲಿ ಸಾಧನೆ ಮಾಡಲು ದಾರಿ ಕಂಡುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಲಿ ಅಭಿಪ್ರಾಯಪಟ್ಟರು. ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ’ ಕಾರ್ಯಕ್ರಮಕ್ಕೆ ಮಂಗಳೂರು వి.వి. ಕಾಲೇಜಿನ ಮೈದಾನದಲ್ಲಿ […]

Share News

ಮಂಗಳೂರು: ಮಹಿಳೆಯರು ಸ್ವಸಹಾಯ ಗುಂಪು ರಚಿಸುವ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಸ್ವಾವಲಂಬನೆಯ ಜೀವನಕ್ಕೆ ಬೇಕಾದ ಸೂಕ್ತ ತರಬೇತಿ ಪಡೆಯಬೇಕಿದೆ. ಪ್ರಸಕ್ತ ಕಾಲಕ್ಕೆ ಅನುಕೂಲವಾಗುವ ಎಐ ‘ಕೌಶಲದ ಮಾಹಿತಿಯನ್ನು ಪಡೆದು ಜೀವನದಲ್ಲಿ ಸಾಧನೆ ಮಾಡಲು ದಾರಿ ಕಂಡುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಲಿ ಅಭಿಪ್ರಾಯಪಟ್ಟರು.

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ’ ಕಾರ್ಯಕ್ರಮಕ್ಕೆ ಮಂಗಳೂರು వి.వి. ಕಾಲೇಜಿನ ಮೈದಾನದಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರು ಆರಾಧನೆಗೆ ಅರ್ಹರಾದರೂ ಅವರನ್ನು ಶೋಷಣೆಗೆ ಒಳಪಡಿಸುವ ಕಾರ್ಯ ನಡೆಯುತ್ತಲೇ ಬಂದಿದೆ. ಅವಕಾಶವನ್ನೇ ನೀಡದೆ ಅವರನ್ನು ದೂಷಿಸುವ ಕಾಲ ಒಂದಿತ್ತು. ಅದಕ್ಕಾಗಿ ಶೇ. 33 ಹಾಗೂ ಶೇ. 50ರಷ್ಟು ಮಹಿಳಾ ಮೀಸಲಾತಿಯನ್ನು ಚುನಾವಣೆಯ ವಿಷಯದಲ್ಲಿ ಜಾರಿಗೆ ತರುವ ಮೂಲಕ ‘ಕ್ರಾಂತಿ ತರಲಾಗಿತ್ತು. ದಾಖಲೆ ಮೀರಿ ದಕ್ಷತೆ ತೋರಿದ್ದಾರೆ. ಗಾಂಧೀಜಿ ಅವರು ಕೂಡ ಮಹಿಳಾ ಶಕ್ತಿ ಬಗ್ಗೆ ಪರಿಗಣಿಸಿದ್ದರು ಪ್ರತಿಭೆಯಲ್ಲಿಪುರುಷರಿಗಿಂತಮಹಿಳೆಯರು ಹೆಚ್ಚು ಪ್ರಬಲರು ಎಂಬ ಕಥೆಗಳೇ ಇವೆ. ಎಲ್ಲ ನದಿಗಳಿಗೂ ಮಹಿಳೆಯರದ್ದೇ ಹೆಸರಿದೆ. ಯಾಕೆಂದರೆ ಅದು ಸಮೃದ್ಧಿಯ ಸಂಕೇತ. ಮಹಿಳೆಯರನ್ನು ಸರಕು ಎಂದು ಪರಿಗಣಿಸಬಾರದು. ಬದಲಿಗೆ ಅವರಿಗೆ ಶಕ್ತಿ ನೀಡಬೇಕು ಎಂದರು.

ದುಶ್ಚಟ ಮುಕ್ತ ಸಮಾಜ ನಿರ್ಮಿಸಿ

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಮಹಿಳೆಯರು ಹುಟ್ಟುವಾಗಲೇ ನಾಯಕತ್ವ ಗುಣ ಬೆಳೆಸಿಕೊಂಡು ಬರುತ್ತಾರೆ. ಹೀಗಾಗಿ ಮನೆಯಿಂದ ತೊಡಗಿಕೊಂಡು ಸಮಾಜದಲ್ಲಿ ನಾಯಕತ್ವ ಗುಣ ಮಹಿಳೆ ಯರಿಗೆ ಸುಲಭವಾಗಿ ಬರುವಂತಾಗಿದೆ. ದುಶ್ಚಟ ಮುಕ್ತ, ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಸಮಾಜವನ್ನು ಸಿದ್ದಗೊಳಿಸಬೇಕು ಎಂದರು.

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಕಣಚೂರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಣಚೂರು ಮೋನು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ನಿಗಮ ಮಂಡಳಿ ಅಧ್ಯಕ್ಷರಾದ ಮಮತಾ ಗಟ್ಟಿ ಶಾಲೆಟ್ ಪಿಂಟೋ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಲ್. ಧರ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್, ಪ್ರಮುಖರಾದ ವಂ। ಫ್ರಾನ್ಸಿಸ್ ಗೋಮ್ಸ್ ಭಾಸ್ಕ‌ರ್ ಎಂ., ಗಣಪತಿ ಗೌಡ, ಮಂಗಳೂರು ತಾಲೂಕು ಮಹಿಳಾ ಮಂಡಲದ ಉಪಾಧ್ಯಕ್ಷೆ ಮನೋರಮಾ ಉಮೇಶನ್, ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ, ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಕಾರ್ಯದರ್ಶಿ ರೇಖಾ ಶೆಟ್ಟಿ ಕೋಶಾಧಿಕಾರಿ ಭಾರತಿ ໖o ಪದಾಧಿಕಾರಿಗಳಾದ ದೇವಕಿ ಅಚ್ಯುತ, ಅನುರಾಧಾ ರಾಜೀವ್, ಪ್ರೇಮಾ ಮಾಧವ್, ಲತಾ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Share News