ಮಂಗಳೂರಿನ ನಮ್ಮಕುಡ್ಲ ಚಾನಲ್ ಆಶ್ರಯದಲ್ಲಿ, ನ್ಯೂ ರವಿ ಇಂಡಸ್ಟ್ರೀಸ್ ಮುಖ್ಯ ಪ್ರಾಯೋಜನೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಮ್ಮಕುಡ್ಲ ನೃತ್ಯಭಜನೆ ಸ್ಪರ್ಧೆ ಸೀಸನ್ 3 ರ ಅಂತಿಮ ಸುತ್ತು ನಡೆಯಿತು.ಮಂಗಳೂರಿನ ಎಸ್. ಡಿ. ಎಂ. ಉದ್ಯಮಾಡಳಿತ ಕಾಲೇಜ್ ಭಜನಾ ತಂಡ 25 ಸಾವಿರ ರೂಪಾಯಿ ನಗದಿನೊಂದಿಗೆ ಒಂದನೇ ಬಹುಮಾನ,ಶೇಷಶಯನ ಕುಣಿತ ಭಜನಾ ತಂಡ ಬೈಕಂಪಾಡಿ 15 ಸಾವಿರದೊಂದಿಗೆ ದ್ವಿತೀಯ ಬಹುಮಾನ ಮತ್ತು ಈಶ್ವರಿ ಭಜನಾ ಮಂಡಳಿ ಪೊಳಲಿ 10 ಸಾವಿರದೊಂದಿಗೆ ತೃತೀಯಾ ಬಹುಮಾನ ಪಡೆಯಿತು.

ಪುತ್ತೂರು ಆನಡ್ಕದ ಶ್ರೀ ರಾಮ ಭಜನಾ ಮಂಡಳಿ ಅದೃಷ್ಟಶಾಲಿ ತಂಡದ ಬಹುಮಾನ ಪಡೆಯಿತು. 5 ತಂಡಗಳಿಗೆ ವಿಶೇಷ ಪ್ರೋತ್ಸಾಹಕ ಬಹುಮಾನ ಹಾಗೂ ಒಂದು ತಂಡಕ್ಕೆ ಶಿಸ್ತಿನ ತಂಡ ನೀಡಲಾಯಿತು. ಶ್ರೀ ರಾಮ ಭಜನಾ ಮಂಡಳಿ ಮೂಡುಶೆಡ್ಡೆ ಇದರ 5ರ ಹರೆಯದ ವರ್ಷ ಎಂಬ ಪುಟ್ಟ ಭಜಕಳಿಗೆ ವಿಶೇಷ ಬಹುಮಾನ ನೀಡಲಾಯಿತು
ಕೇಂದ್ರದ ಮಾಜಿ ವಿತ್ತ ಮಂತ್ರಿ ಬಿ. ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಒಡಿಯೂರು ಸಾಧ್ವಿ ಮಾತಾನಂದಮಯಿ, ಶ್ರೀಮತಿ ಮಾಲತಿ ಜೆ. ಪೂಜಾರಿ, ಜನಾರ್ದನ ಪೂಜಾರಿಯವರ ಪುತ್ರ ಬಿ.ಸಂತೋಷ ಪೂಜಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಹೆಚ್ ಎಸ್ ಸಾಯಿರಾಂ, ಐಸಿಎಐ ಮಂಗಳೂರು ಘಟಕದ ಮಾಜಿ ಅಧ್ಶಕ್ಷರಾದ ಸಿಎ ಎಸ್ ಎಸ್ ನಾಯಕ್, ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಆರ್ ಪದ್ಮರಾಜ್, ಎಸ್ ಎಲ್ ಶೇಟ್ ಜ್ಯುವೆಲ್ಲರ್ಸ್ & ಡೈಮಂಡ್ಸ್ ಇದರ ಮಾಲಕ ಪ್ರಶಾಂತ್ ಶೇಟ್, ಅರೆಕೆರೆಬೈಲ್ ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಎ. ಸೀತಾರಾಮ, ಎಸ್. ಆರ್. ಎಸ್. ಮಸಾಲ ಸಂಸ್ಥೆಯ ಶೈಲೇoದ್ರ ಸುವರ್ಣ, ಭಾರತಿ ಬಿಲ್ಡರ್ಸ್ ಇದರ ಲೋಕನಾಥ ಶೆಟ್ಟಿ, ಅಸ್ತ್ರ ಗ್ರೂಪ್ ಸಿ.ಇ.ಒ ಲಂಚುಲಾಲ್, ನಟ ಯತೀಶ್ ಪೂಜಾರಿ,ಕುದ್ರೋಳಿ ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ತೀರ್ಪುಗಾರರು ಜಯರಾಮ ಶೆಟ್ಟಿಗಾರ್ ಮಣಿಪಾಲ ಮತ್ತು ತ್ರಿಷಾ ಶೆಟ್ಟಿ, ನಮ್ಮಕುಡ್ಲ ಚಾನಲ್ ನಿರ್ದೇಶಕ ಸೋದರರು ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ನೃತ್ಯ ಭಜನಾ ಸ್ಪರ್ಧೆ ಸಂಘಟಕರಾದ ದಯಾನಂದ ಕಟೀಲ್, ಶ್ರೀಕಾಂತ ರಾವ್, ಸುದರ್ಶನ ಮೂಡುಶೆಡ್ಡೆ, ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಮತ್ತು ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
