ಮಂಗಳೂರು;ಕರಾವಳಿ ಯಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.
ನಗರದ ಬಾವುಗುಡ್ಡೆಯ ಈದ್ದಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತಾ ಪ್ರವಚನ ನಡೆಯಿತು.

ಈದುಲ್ ಅಝಾ ಅಥವಾ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿ ದಾನದ ಸಂಕೇತವಾಗಿದೆ. ಹಬ್ಬವು ದೇವನ ಅನುಸರಣೆ ಮೂಲಕ ಸಮಾನತೆಯ ಸಂದೇಶ ವನ್ನು ನೀಡುತ್ತದೆ. ನಾಡಿನಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ರಾಗಿರಬೇಕು. ಸಹನೆಯೇ ನಮ್ಮ ಮೂಲ ಆಶಯ ವಾಗಬೇಕು ಎಂದು ಖಾಝಿಯವರು ಹೇಳಿದರು.