ಮಂಗಳೂರು ರಥಬೀದಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ ಸೇವೆಯನ್ನು ಸಮರ್ಪಿಸಿದರು.