• Home  
  • *ಮಕ್ಕಳು ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿವೃತ್ತ ಶಿಕ್ಷಕಿ ನಲಿನಾಕ್ಷಿ ಉದಯರಾಜ್*
- DAKSHINA KANNADA

*ಮಕ್ಕಳು ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿವೃತ್ತ ಶಿಕ್ಷಕಿ ನಲಿನಾಕ್ಷಿ ಉದಯರಾಜ್*

ಮಂಗಳೂರು. ಡಿಸೆಂಬರ್ 17 : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಶ್ರೀರಾಮಾ ಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಂಚಾಡಿ ಜಂಟಿ ಆಶ್ರಯದಲ್ಲಿ 115ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಬಾಲಚಂದ್ರ ಕೆ ವಹಿಸಿದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ನಿವೃತ್ತ ಶಿಕ್ಷಕಿ ನಲಿನಾಕ್ಷಿ ಉದಯರಾಜ್ ಮಾತನಾಡುತ್ತಾ ಮಕ್ಕಳು ದಿನನಿತ್ಯ ದಿನಚರಿ ಡೈರಿ ಬರೆಯುವ ಹವ್ಯಾಸವನ್ನು ಹೊಂದಿರಬೇಕು .ಮೊದಲು ತಮ್ಮನ್ನು ತಾನು ಪ್ರೀತಿಸಬೇಕು .ಮುಂದೆ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದರು. ತಮ್ಮ ಹೆತ್ತವರು ಹಾಗೂ ಗುರುಗಳಿಗೆ ಕೃತಜ್ಞತೆಗಳನ್ನು ನಿತ್ಯವೂ ಸಲ್ಲಿಸಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು . ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಬೆನ್ನೆಟ್ ಜೆ ಅಮ್ಮನ್ನ ಹಾಗೂ ತುಳು ಪರಿಷತ್ ಮಂಗಳೂರು ಅಧ್ಯಕ್ಷರಾದ ಶುಭೋದಯ ಆಳ್ವ, ಸಂಸ್ಥೆಯ. ಆಡಳಿತ ಅಧಿಕಾರಿ ಡಾ. ರಾಜೇಶ್ ಕದ್ರಿ ,ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು. ಡಾ.ಮಾಲತಿ ಶೆಟ್ಟಿ ಮಾಣೂರು ಎಲ್ಲರನ್ನು ಸ್ವಾಗತಿಸಿದರು ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.

Share News