ನವದೆಹಲಿ: ಮಹಾತ್ಮ ಗಾಂದಿಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ನೀಲಂಬೆನ್ ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು.
ಜನವರಿ 30, 2008 ರಂದು ಮಹಾತ್ಮ ಗಾಂಧಿಯವರ 60 ನೇ ಪುಣ್ಯತಿಥಿಯಂದು, ನೀಲಂಬೆನ್ ಪಾರಿಖ್ ಅವರು ಬಾಪು ಅವರ ಕೊನೆಯ ಚಿತಾಭಸ್ಮವನ್ನು ಗೌರವಯುತವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಅನುಯಾಯಿಗಳು ಮತ್ತು ಕುಟುಂಬ ಸದಸ್ಯರು ಸಹ ಅವರಿಗೆ ಗೌರವ ಸಲ್ಲಿಸಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ನೀಡುವುದು ಇದರ ಉದ್ದೇಶವಾಗಿತ್ತು.
ನೀಲಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು. ಅವರ ಮಗ ಸಮೀರ್ ಪಾರಿಖ್ ನವಸಾರಿಯಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ದಿವಂಗತ ಯೋಗೇಂದ್ರಭಾಯಿ.