canaratvnews

*ಕುಪ್ಪೆಪದವು ಮತ್ತು ಮುತ್ತೂರು ವಲಯ ಕಾಂಗ್ರೆಸ್ ಸಭೆ*

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕುಪ್ಪೆಪದವು ಹಾಗೂ ಮುತ್ತೂರು ವಲಯ ಕಾಂಗ್ರೆಸ್ ಸಮಿತಿಯ ಜಂಟಿ ಸಭೆಯು ಶನಿವಾರದಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಕೆಪಿಸಿಸಿ ವಕ್ತಾರರಾದ ಮುಹಮ್ಮದ್ ಬಡಗನ್ನೂರು ಅವರು ಭಾಗವಹಿಸಿ, ಎಸ್‌ಐಆರ್ (SIR) ಪ್ರಕ್ರಿಯೆಯ ಕುರಿತು ಕಾರ್ಯಕರ್ತರಿಗೆ ಸುದೀರ್ಘ ಮಾಹಿತಿ ನೀಡಿದರು. ಪಕ್ಷದ ಸಂಘಟನೆ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಇದೇ ವೇಳೆ ಇನಾಯತ್ ಅಲಿ ಫೌಂಡೇಷನ್ ವತಿಯಿಂದ ಸಾಮಾಜಿಕ ಕಳಕಳಿಯ ಭಾಗವಾಗಿ ಸ್ಥಳೀಯ 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಪ್ರಮುಖ ನಾಯಕರಾದ ಗಿರೀಶ್ ಆಳ್ವ, ರಾಮಚಂದ್ರ ಸಾಲ್ಯಾನ್, ಡಿ.ಪಿ. ಹಮ್ಮಬ್ಬ, ಹರಿಯಪ್ಪ, ಅಬೂಬಕ್ಕರ್ ಕಲ್ಲಾಡಿ, ಚಂದ್ರಹಾಸ ಶೆಟ್ಟಿ, ಅಬ್ದುಲ್ ರಝಾಕ್, ದಯಾನಂದ ಶೆಟ್ಟಿ, ಉದಯ ಕಂಬಳಿ, ಹಮೀದ್ ಮುತ್ತೂರು, ರೊನಾಲ್ಡ್ ಅಡ್ಯಾರ್, ಅಝೀಝ್, ಅಬ್ದುಲ್ ರಹಮಾನ್, ಶರೀಫ್, ಲತೀಫ್, ರವಿ ಕೊಳವೂರು, ಮುಸ್ತಫಾ, ನವೀನ್ ಪೂಜಾರಿ, ಹಸನ್ ಕುಪ್ಪೆಪದವು ಸೇರಿದಂತೆ ವಲಯದ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Share News
Exit mobile version