ವಿಟ್ಲ : ಬಂಟ್ವಾಳ ತಾಲೂಕು ಕೃಷಿ ಇಲಾಖೆಯ ವತಿಯಿಂದ ನೈಸರ್ಗಿಕ ಕೃಷಿ ಅಭಿಯಾನ ತರಬೇತಿ ಕಾರ್ಯಕ್ರಮವು ಅಳಿಕೆ ಗ್ರಾಮ ಪಂಚಾಯಿತಿನ ಸಭಾಭವನದಲ್ಲಿ ನಡೆಯಿತು. ಬಂಟ್ವಾಳ ತಾಲೂಕಿನ 5 ಗುಚ್ಛ ಗ್ರಾಮಗಳಲ್ಲಿ ಒಂದಾದ ಅಳಿಕೆ ಗುಚ್ಛದ ತರಬೇತಿ ಕಾರ್ಯಕ್ರಮದಲ್ಲಿ ಅಳಿಕೆ ಗ್ರಾಮ ಪಂಚಾಯತಿನ ಸದಸ್ಯ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಂದನ್ ಶೆಣೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಸುನಿತಾ ಉದಯ ಶೆಟ್ಟಿ ಬೊಂಡಾಲ ಇವರು ನೈಸರ್ಗಿಕ ಕೃಷಿ ವಿಧಾನಗಳಾದ ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ನೀಮಾಸ್ತ್ರ ಇದರ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಸುನೀತಾ ಉದಯ ಶೆಟ್ಟಿ, ಜೀವಾಮೃತ ತಯಾರಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಅಳಿಕೆ ಪಂಚಾಯತ್ ಪಿ ಡಿ ಓ ಉದಯ ಸಹಜ ಕೃಷಿಯ ಮಹತ್ವ ಕುರಿತು ಮಾಹಿತಿ ನೀಡಿದರು. ಅಳಿಕೆ ಗ್ರಾಮ ಪಂಚಾಯತಿನ ಸಿ ಆರ್ ಪಿ ಸವಿತಾ ಡಿಸೋಜಾ ಸ್ವಾಗತಿಸಿದರು. ಸಿ ಆರ್ ಪಿ ಗಾಯತ್ರಿ ವಂದಿಸಿದರು. ವಿಟ್ಲ ಹೋಬಳಿಯ ಆತ್ಮ ಯೋಜನೆ ತಾಂತ್ರಿಕ ಸಹಾಯಕ ವಿರೂಪಾಕ್ಷ ಹಡಪದ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಬಿ.ಆರ್. ಸಿ. ವಿನುತ್ ನಾಯಕ್, ವೀರಕಂಬ ಸಿ ಆರ್ ಪಿ ನಮಿತಾ, ಎಲ್ ಸಿ ಆರ್ ಪಿ ರೇವತಿ ಉಪಸ್ಥಿತರಿದ್ದರು. 50 ಕ್ಕೂ ಅಧಿಕ ರೈತ ಫಲಾನುಭವಿಗಳು ಪಾಲ್ಗೊಂಡಿದ್ದರು.