canaratvnews

‘ಕಾಸ್ಕ್’ಸಂಸ್ಥೆಯ ಸದಸ್ಯರು ಹಾಗೂ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭ

ಮಂಗಳೂರು ಸಪ್ಟೆಂಬರ್ 26: ಕಾಸ್ಕ್ ಸಂಸ್ಥೆಯ ವಾರ್ಷಿಕ . ಮಹಾಸಭೆಯ ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ಬೆಂದೂರ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು.

ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಸಾನ್ಸಿಯಾ ಅವರ ಕೊಂಕಣಿ ಪರಂಪರೆಯ ನುಡಿನಮನ, ಪ್ರಜ್ವಲ್ ಮತ್ತು ಶವಿಲ್ ಅವರ ‘ಗುಮಟ್’ ವಾದನ, ಮೆಲ್ವಿಟಾ ಹಾಗೂ ತಂಡದಿಂದ ದೆಖ್ಣಿ ನಾಚ್, ರೋಮಿತ್ ಹಾಗೂ ತಂಡದಿಂದ ತೊಣಿಯೊ ನಾಚ್ ನಂತಹ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಫ್ರ್ಯಾಂಕ್ಲಿನ್ ಅವರ ‘ ಮಾಂಡೊ’ ಗಾಯನವು ಉತ್ಸವಕ್ಕೆ ಶಾಸ್ತ್ರೀಯ ಗೋವಾ ಸೊಬಗನ್ನು ನೀಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿಮಾ ಅವರನ್ನು ಗೌರವಿಸಲಾಯಿತು. ಜಾನೆಟ್ ಡಿಸೋಜಾ ನಡೆಸಿ ಕೊಟ್ಟ ಹೌಸಿ ಹೌಸಿ ಆಟದೊಂದಿಗೆ ಉಪಾಧ್ಯಕ್ಷರಾದ ಡಾ। ರೋಹನ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Share News
Exit mobile version