• Home  
  • *ಶ್ರೀ ಜೋಸಫ್ ಮಥಾಯಸ್ಗೆ ಸಮಾಜ ಸೇವೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ*
- DAKSHINA KANNADA - HOME - LATEST NEWS

*ಶ್ರೀ ಜೋಸಫ್ ಮಥಾಯಸ್ಗೆ ಸಮಾಜ ಸೇವೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ*

ಮಂಗಳೂರು: ಶ್ರೀ ಜೋಸಫ್ ಮಥಾಯಸ್ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರದ ಸೇವೆಗೆ ನೀಡಿರುವ ಕೊಡುಗೆ ಗುರುತಿಸಿ 2025-26ನೇ ಸಾಲಿನ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಜೋಸಫ್ ಮಥಾಯಸ್ ಶಿಬ್ರಿಕೆರೆ ಮಂಗಳೂರು (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೆರಿಟ್ ಪ್ರೈಟ್ ಸ್ಟಿಸಂ. ಕಂ.ಎಲ್. ಎಲ್. ಸಿ )ರವರು ಕನ್ನಡ ಭಾಷೆ, ಸಂಸ್ಕೃತಿ ಕಲೆಗಳ ಬಗ್ಗೆ ಅಪಾರ ಕಾಳಜಿವುಳ್ಳವರು, ಕನ್ನಡ ಭಾಷೆ ಹಾಗೂ ಕಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ಪರ ಸಂಘಟನೆಗಳಗೆ ಬೆನ್ನೆಲುಬಾಗಿ […]

Share News

ಮಂಗಳೂರು: ಶ್ರೀ ಜೋಸಫ್ ಮಥಾಯಸ್ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರದ ಸೇವೆಗೆ ನೀಡಿರುವ ಕೊಡುಗೆ ಗುರುತಿಸಿ 2025-26ನೇ ಸಾಲಿನ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಜೋಸಫ್ ಮಥಾಯಸ್ ಶಿಬ್ರಿಕೆರೆ ಮಂಗಳೂರು (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೆರಿಟ್ ಪ್ರೈಟ್ ಸ್ಟಿಸಂ. ಕಂ.ಎಲ್. ಎಲ್. ಸಿ )ರವರು ಕನ್ನಡ ಭಾಷೆ, ಸಂಸ್ಕೃತಿ ಕಲೆಗಳ ಬಗ್ಗೆ ಅಪಾರ ಕಾಳಜಿವುಳ್ಳವರು, ಕನ್ನಡ ಭಾಷೆ ಹಾಗೂ ಕಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ಪರ ಸಂಘಟನೆಗಳಗೆ ಬೆನ್ನೆಲುಬಾಗಿ ನಿಂತು ಕನ್ನಡಪರ ಸಂಘಟಟನೆಗಳಿಗೆ ಸದಾ ಬೆಂಲ ನೀಡುತ್ತಾ ಬಂದಿರುತ್ತಾರೆ ಕಲಾ ಪೋಷಕರಾದ ಇವರು ಯಕ್ಷಗಾನ, ಸಾಂಸ್ಕೃತಿ ಇತರ ಕಲೆಗಳಾದ, ಕುರುಕುರು ಮಾಮ, ಬಾಳಸಂತ್ ಧಪ್ ಮುಂತಾದುವುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದು ಸಮಾಜದ ಬಡವರ ಬಗ್ಗೆ ಅತೀವ ಕಾಳಜಿ ವಹಿಸಿ ಅನೇಕ ಸಾಮಾಜಿಕ ಕಾರ್ಯವನ್ನು ನಿರ್ವಹಿಸಿರುತ್ತಾರೆ.

ಕರಾವಳಿ ವಿಭಾಗದ ಹಲವಾರು ಶಾಲೆ, ದೇವಾಲಯ, ರಂಗಮಂದಿರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಪೋಷಕರಾಗಿದ್ದು, ಇದರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಹಾಯ, ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯಧನ, ಬಡ ಮಕ್ಕಳಿಗೆ ವಿದ್ಯಾರ್ಜನೆ ಆರ್ಥಿಕ ಸಹಾಯ ನೀಡುತ್ತಾ ಬಂದಿರುತ್ತಾರೆ. ಗ್ರಾಮೀಣ ಅಭಿವೃದ್ಧಿ ಚಟುವಟಿಕೆಯಲ್ಲಿ ನಿರಂತರ ಭಾಗವಹಿಸುವಿಕೆ ಗ್ರಾಮೀಣ ಪ್ರದೇಶಗಳಲ್ಲಿ ಸೌಹಾರ್ದ ಕಾರ್ಯಕ್ರಮಗಳಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜನ ಮನ್ನಣೆ ಗಳಿಸಿದ್ದಾರೆ. ಸಾರ್ವಜನಿಕ ಕಾರ್ಯಕರ್ತರಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಯುತರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು, ಇವರ ಸೇವೆಯನ್ನು ಗುರುತಿಸಿ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರಗಳಲ್ಲಿ ನೀಡಿರುವ ಗಣನೀಯಗೆ ಈ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಜಿಲ್ಲಾ ಆಡಳಿತವು ಆಯ್ಕೆ ಮಾಡಿದೆ.

Share News