• Home  
  • *ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024-25ನೇ ಸಾಲಿನ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳ ಘೋಷಣೆ*
- DAKSHINA KANNADA - HOME

*ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024-25ನೇ ಸಾಲಿನ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳ ಘೋಷಣೆ*

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024-25ನೇ ಸಾಲಿನ ಪ್ರತಿಷ್ಠಿತ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪ್ರಶಸ್ತಿ’ಗಳನ್ನು ಘೋಷಿಸಿದೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸ್ಟೇನಿ ಅಲ್ವಾರಿಸ್ ಅವರು ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಗೌರವ ಪ್ರಶಸ್ತಿ ವಿಜೇತರು : ಕೊಂಕಣಿ ಸಾಹಿತ್ಯ: ರೋನ್ ರೋಚ್ ಕಾಸಿಯಾ ಕೊಂಕಣಿ ಕಲೆ: ರಾಮದಾಸ್ ದತ್ತಾತ್ರೇಯ ಗುಲ್ವಾಡಿ ಕೊಂಕಣಿ ಜಾನಪದ: ಸೈರು (ಮುರಳೀಧರ್) ಪುಟ್ಟು ನಾಯ್ಕ್ ಪುಸ್ತಕ ಪ್ರಶಸ್ತಿ ವಿಜೇತರು : ಕವನ ಸಂಕಲನ: ಆಂಡ್ರ್ಯೂ ಎಲ್. ಡಿಕುನ್ಹಾ […]

Share News

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024-25ನೇ ಸಾಲಿನ ಪ್ರತಿಷ್ಠಿತ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪ್ರಶಸ್ತಿ’ಗಳನ್ನು ಘೋಷಿಸಿದೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸ್ಟೇನಿ ಅಲ್ವಾರಿಸ್ ಅವರು ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಗೌರವ ಪ್ರಶಸ್ತಿ ವಿಜೇತರು : ಕೊಂಕಣಿ ಸಾಹಿತ್ಯ: ರೋನ್ ರೋಚ್ ಕಾಸಿಯಾ ಕೊಂಕಣಿ ಕಲೆ: ರಾಮದಾಸ್ ದತ್ತಾತ್ರೇಯ ಗುಲ್ವಾಡಿ ಕೊಂಕಣಿ ಜಾನಪದ: ಸೈರು (ಮುರಳೀಧರ್) ಪುಟ್ಟು ನಾಯ್ಕ್

ಪುಸ್ತಕ ಪ್ರಶಸ್ತಿ ವಿಜೇತರು : ಕವನ ಸಂಕಲನ: ಆಂಡ್ರ್ಯೂ ಎಲ್. ಡಿಕುನ್ಹಾ (ಕೃತಿ: ‘ಉಜ್ವಾಡಾಚೆ ವೆಂಗೇಂಟ್’) ಪ್ರಬಂಧ: ರೋಷನ್ ಮೆಲ್ಕಿ ಸಿಕ್ವೇರಾ (ಕೃತಿ: ‘ಕೊಂಕಣಿ ಸರ್ಕಸ್’) ಸಣ್ಣ ಕಥೆಗಳು: ರಿಚರ್ಡ್ ಅಲ್ವಾರಿಸ್ (ಕೃತಿ: ‘ಫಿತುರಿ’).

ಈ ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 26, 2026ರಂದು ಸಂಜೆ 5:00 ಗಂಟೆಗೆ ಉಡುಪಿ ಜಿಲ್ಲೆಯ ಉದ್ಯಾವರ ಚರ್ಚ್ ಆವರಣದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ ಮತ್ತು ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Share News