• Home  
  • *ಕನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ.ಕಾವ್ಯಾಂ ವ್ಹಾಳೊ9′ ಕೊಂಕಣಿ ಕವಿಗೋಷ್ಠಿ*
- DAKSHINA KANNADA - HOME

*ಕನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ.ಕಾವ್ಯಾಂ ವ್ಹಾಳೊ9′ ಕೊಂಕಣಿ ಕವಿಗೋಷ್ಠಿ*

ಮಂಗಳೂರು :ಕನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಡಿ. 06. ರಂದು ‘ಕಾತ್ಕಾಂ ವಾ’ ಶೀಷಿಕೆಯಡಿ ಕವಿಗೋಷ್ಠಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಥಾನಿ ಆಲ್ವಾರಿನ್‌ರವರು ಕಾಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಅಕಾಡೆಮಿಯು ವಷದ ಆರಂಭದಿಂದಲೇ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕವಿಗೋಷ್ಠಿಯು ಇದರಲ್ಲಿ ಒಂದು. ಕವಿಗಳಿಗೆ ವೇದಿಕೆಯನ್ನು ನೀಡುತ್ತಾ, ಹೊಸ ಕವಿಗಳನ್ನು ಪ್ರೋತ್ಸಾಹಿಸುತ್ತಿದೆ. ಖ್ಯಾತ ಕವಿಯಾದ ದಿ| ಚಾ. ಪ್ರಾ. ಡಿಕೋಸ್ತರವರ 33ನೇ ವಷದ ಸರಣೆಗಾಗಿ ಇಂದಿನ ಕವಿಗೋಷ್ಟಿಯನ್ನು ಅಪಿಸುತ್ತಿದ್ದೇವೆ. ಈ ಕವಿಗೋಷ್ಠಿಯು ಕವಿತೆಗಳನ್ನು ರಚಿಸಲು ಯುವಜನರಿಗೆ, ಹಿರಿಯರಿಗೆ ಪ್ರೇರಣೆಯಾಗಲಿ’ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.

ಮುಖ್ಯ ಅತಿಥಿಯಾದ ಇನ್‌ಫೆಂಟ್ ಜೀಸಸ್ ಪ್ರೈನ್‌ನ ನಿದೇಶಕರಾದ ಫಾ। ಸ್ವೀವನ್ ಅಲ್ವಿನ್ ಪಿರೇರಾರವರು. ವಿವಿಧ ಪ್ರದೇಶದಲ್ಲಿ ವಿವಿಧ ಭಾಷೆಗಳನ್ನು ಮಾತಾನಾಡುವ ಜನ ಹಾಗೂ ಸಾಹಿತಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಾಷೆಯ ಬರಹಗಳು ಹರಿದಾಡುತ್ತಿವೆ. ಆದರೆ ಜಾಲತಾಣಗಳಲ್ಲಿ (AI) ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಬರೆಯುವವರ ಸಂಖ್ಯೆ ಬಹಳ ವಿರಳವಾಗಿದ್ದರೂ ಬರೆಯುವುದು ಅಸಾಧ್ಯವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಕೊಂಕಣಿ ಭಾಷೆಯು ಓದಲು ಸಿಗದಿದ್ದರೆ, ಕೊಂಕಣಿ ಭಾಷೆಯು ದುಬಲವಾಗಬಹುದು. ನಾವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಲಿಪಿಯಲ್ಲಿ ಕೊಂಕಣಿ ಬರೆಯಲು ಪ್ರಾರಂಭಿಸಿ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಬರಹಗಾರರಿಗೆ ಹಾಗೂ ಓದುಗರಿಗೆ ಪ್ರೇರಣೆ ದೊರೆಯುವಂತೆ ಮಾಡಬಹುದು ಎಂದರು.

ಖ್ಯಾತ ಕವಿಗಳಾದ ಶ್ರೀ ಆ್ಯಂಡ್ರು ಎಲ್. ಡಿಕುನ್ಹಾರವರು ಕವಿಗೋಷ್ಠಿಯನ್ನು ನಡೆಸಿ. ಕವಿ. ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ದಿ| ಚಾ. ಪ್ರಾ ಡಿಕೋಸ್ತರವರ ನೆನಪಿಗಾಗಿ ಅವರು ರಚಿಸಿದ ಉತ್ತಮ ಕವಿತೆಗಳನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ನಾನಿ ಆಲ್ವಾರಿನ್, ಎಂಜಲ್ ಕುಟಿನ್ಹಾ, ರಿಫೊನ್ ನಬ್ರೆತ್, ಅನ್ಯದಾಂತಿ ಇವರು ವಾಚಿಸಿದರು. ವಿನ್ಸೆಂಟ್ ಪಿಂಟೊ ಅಂಜೆಲೊರ್. ಕೃತಿಕಾ ಕಾಮತ್, ರೇಮಂಡ್ ಡಿಕುನ್ಹಾ, ಎಲ್ಸನ್ ಡಿಕೋಸ್ತ ಹಿಗಾನ್, ಸೋನಿಯಾ ಡಿಕೋಸ್ತ, ಲವೀನ ದಾಂತಿ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.

ಅಕಾಡೆಮಿ ಸದಸ್ಯರಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ನವೀನ್ ಲೋಬೊ, ಸಮರ್ಥ್ಭಟ್ ಉಪಸ್ಥಿತರಿದ್ದರು,

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678