• Home  
  • ರೈತರಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ
- DAKSHINA KANNADA - HOME - LATEST NEWS

ರೈತರಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

ಮಂಗಳೂರು : ರೈತರಿಗೆ ಪ್ರೋತ್ಸಾಹಧನ ನೀಡಲು ತೋಟಗಾರಿಕೆ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನಿಷ್ಠ ಅರ್ಧ ಎಕರೆಯಿಂದ 5 ಎಕರೆವರೆಗೆ ಕಾಳುಮೆಣಸು, ಕೋಕೊ, ಗೇರು, ತಾಳೆಬೆಳೆ, ರಾಂಬೂಟಾನ್, ಡ್ರಾಗನ್ ಫ್ರೂಟ್, ಮ್ಯಾಂಗೋಸ್ಟಿನ್, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ದಾಲ್ಚಿನ್ನಿ(ಚಕ್ಕೆ) ಬೆಳೆಗಳ ಪ್ರದೇಶ ವಿಸ್ತರಣೆಗೆ (ಹೊಸ ತೋಟ) ಶೇ 40ರ ಸಹಾಯಧನ, ಕಾಳುಮೆಣಸು ಪುನಶ್ಚೇತನಕ್ಕೆ ಶೇ 50 ಸಹಾಯಧನ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ,

ಜೇನು ಸಾಕಾಣಿಕೆ ಯೋಜನೆಯಡಿ ಜೇನುಪೆಟ್ಟಿಗೆ ಹಾಗೂ ಜೇನು ಕುಟುಂಬ ಖರೀದಿಗೆ ಶೇ 75 ಸಹಾಯಧನ ಇರುತ್ತದೆ.

ಕ್ಷೇತ್ರ ಮಟ್ಟದ ಗೋದಾಮು ನಿರ್ಮಾಣಕ್ಕೆ (ಶೇ 50) ₹1 ಲಕ್ಷ ರೂ. ಸಹಾಯಧನ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ₹10 ಲಕ್ಷ ರೂ. ಸಹಾಯಧನ, ಅಣಬೆ ಉತ್ಪಾದನೆ ಘಟಕಕ್ಕೆ ಗರಿಷ್ಠ ₹8 ಲಕ್ಷ ಸಹಾಯಧನ, ಸೋಲಾರ್ ಪಂಪ್ ಅಳವಡಿಕೆಗೆ₹1.50 ಲಕ್ಷ,

ಹನಿ ನೀರಾವರಿ, ತುಂತುರು ನೀರಾವರಿಗೆ ಶೇ 90, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಗೆ ಶೇ30ರ ಸಹಾಯಧನ ಇರುತ್ತದೆ. ರೈತರು ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಜೂ.30ರ ಒಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678