• Home  
  • ಹಾಲಿನ ದರ ಪ್ರತಿ ಲೀ.ಗೆ ₹4 ಏರಿಕೆ: ಸಚಿವ ಸಂಪುಟದ ಅನುಮೋದನೆ
- HOME - STATE

ಹಾಲಿನ ದರ ಪ್ರತಿ ಲೀ.ಗೆ ₹4 ಏರಿಕೆ: ಸಚಿವ ಸಂಪುಟದ ಅನುಮೋದನೆ

ಬೆಂಗಳೂರು: ಗ್ರಾಹಕರಿಗೆ ನಂದಿನ ಹಾಲಿನ ಬೆಲೆಏರಿಕೆ ಬಿಸಿ ತಟ್ಟಿದ್ದು,  ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಇಂದು ನಡೆದ  ಸಚಿವ ಸಂಪುಟದಲ್ಲಿ ಹಾಲು ಒಕ್ಕೂಟಗಳ ಮನವಿಗೆ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಒಂದೇ ವರ್ಷದಲ್ಲಿ ಎರಡು ಬಾರಿಗೆ ಹಾಲಿನ ದರ ಏರಿಕೆ ಮಾಡಿದಂತಾಗಿದೆ.

ಇದೇ ಫೆಬ್ರವರಿಯಲ್ಲಿ ಪ್ರತಿ ಲೀಟರ್​ಗೆ  2 ರೂ ಏರಿಕೆ ಮಾಡಲಾಗಿತ್ತು. ಇದೀಗ ಲೀಟರ್​ಗೆ ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹಾಲಿನ ದರ ಏರಿಕೆ ದೊಡ್ಡ ಹೊರೆಯಾದಂತಾಗಿದೆ.

 

ಹಾಲಿನಹೊಸ ದರ ಹೇಗಿದೆ.?

  • ನೀಲಿಪ್ಯಾಕೆಟ್ ಹಾಲು– 44 ರೂ.ದಿಂದ (ಪ್ರತಿ ಲೀ.​ಗೆ) 48 ರೂ. ಏರಿಕೆ.
  • ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58 ರೂ.
  • ಸಮೃದ್ಧಿ ಹಾಲಿನಪ್ಯಾಕೆಟ್: 56 ರೂ. ನಿಂದ 60 ರೂ.
  • ಗ್ರೀನ್ ಸ್ಪೇಷಲ್ ಹಾಲು:  54 ರೂ. ನಿಂದ 58 ರೂ.
  • ನಾರ್ಮಲ್ ಗ್ರೀನ್ ಹಾಲು:  52 ರೂ. ನಿಂದ 56 ರೂ.

 

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678