ಮಂಗಳೂರು,ಡಿ.11:-2025-26 ನೇ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮವು ಡಿಸೆಂಬರ್ 20 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಕರಾವಳಿ ಉತ್ಸವದ ಲೋಗೋ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅದರಂತೆ ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇವುಗಳ ಸಮ್ಮಿಲನದ ಲೋಗೋವನ್ನು ತಯಾರಿಸಿ ಡಿಸೆಂಬರ್ 17 ರೊಳಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ (ದೂರವಾಣಿ ಸಂಖ್ಯೆ: 08242453926/906313259) ಅಥವಾ ಇ-ಮೇಲ್: ಚಿಜಣouಡಿismmಚಿಟಿgಚಿಟoಡಿe@gmಚಿiಟ.ಛಿom ಗೆ ಸಲ್ಲಿಸಬಹುದು.
ಅತ್ಯುತ್ತಮವಾಗಿ ಲೋಗೋ ತಯಾರಿಸಿದ ಅಭ್ಯರ್ಥಿಗಳಿಗೆ ರೂ.50,000 ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


