Site icon canaratvnews

ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬೆಳ್ತಂಗಡಿ ಶಾಖೆ ಶೀಘ್ರದಲ್ಲಿ ಶುಭಾರಂಭ

ಮಂಗಳೂರು : ಮಂಗಳೂರಿನ ಬೆಂದೂರ್‌ವೆಲ್ ಇಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾ ದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.

 

ಪ್ರಸ್ತುತ ಸೊಸೈಟಿಯ ಶಾಖೆಯು ಮಂಗಳೂರು, ಸುರತ್ಕಲ್, ಉಡುಪಿ ಹಾಗೂ ಬಂಟ್ವಾಳದಲ್ಲಿದ್ದು, ನೂತನ ಶಾಖೆಯನ್ನು ಬೆಳ್ತಂಗಡಿಯ ನೊರೊನ ಕಾಂಪ್ಲೆಕ್ಸ್ ಚರ್ಚ್ ರೋಡ್ ಹತ್ತಿರ ಬೆಳ್ತಂಗಡಿ ಇಲ್ಲಿ ತೆರೆಯಲು ಸಜ್ಜಾಗಿದೆ. 30 ವರ್ಷಗಳ ವಿಶ್ವಾಸಾರ್ಹ ಸೇವೆ ಮಾಡುತ್ತಾ ಬಂದಿರುವ ಸೊಸೈಟಿಯು ಸತತ ಲಾಭ ಗಳಿಕೆಯೊಂದಿಗೆ, ಸದಸ್ಯರಿಗೆ ಸತತ 20% ಡಿವಿಡೆಂಡ್ ನೀಡುತ್ತಾ ಬರುತ್ತಿದೆ. ಸರ್ಕಾರದ ಅಡಿಟ್ ವರ್ಗೀಕರಣದಲ್ಲಿ ಸತತ ‘ಎ’ ವರ್ಗ ಪಡೆಯುವುದರೊಂದಿಗೆ ಉತ್ತಮ ಅಭಿವೃದ್ಧಿಗೆ ಎಸ್ ಡಿ ಸಿ ಸಿ ಬ್ಯಾಂಕ್ ಸಾಧನ ಪ್ರಶಸ್ತಿಯನ್ನು ಸತತ ಪಡೆಯುತ್ತಾ ಬರುತ್ತಿದೆ.

ಎಲ್ಲಾ ಶಾಖೆಗಳು ಕಂಪ್ಯೂಟರಿಕೃತ ಲೆಕ್ಕಪತ್ರವ್ಯವಸ್ಥೆ ಎಲ್ಲಾ ಭದ್ರತಾ ವ್ಯವಸೆಗಳೊಂದಿಗೆ ಗ್ರಾಹಕರಿಗೆ ಉತ್ತಮ ಬ್ಯಾಂಕಿAಗ್ ಸೇವೆ ನೀಡುತ್ತಾ ಬರುತ್ತಿದೆ. ಬೆಳ್ತಂಗಡಿ ಶಾಖೆಯು ಆರಂಭದ ಕೊಡುಗೆಯಾಗಿ ಸಾಮಾನ್ಯ ಠೇವಣಿ 1 ವರ್ಷಕ್ಕೆ 8.50%, 2 ವರ್ಷಕ್ಕೆ 9%, 3 ವರ್ಷಕ್ಕೆ 9.50% ಹಾಗೂ ಹಿರಿಯ ನಾಗರಿಕರಿಗೆ 1 ವರ್ಷಕ್ಕೆ 9%, 2 ವರ್ಷಕ್ಕೆ 9.50%, 3 ವರ್ಷಕ್ಕೆ 10% ನೀಡುತ್ತಿದ್ದು ಗ್ರಾಹಕ ಬಂಧುಗಳು ಕೆಲವೇ ದಿನಗಳ ಅವಧಿ ನೀಡುವ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಲು ಸೊಸೈಟಿಯ ಪ್ರಕಟಣೆಯಲ್ಲಿ ಕೋರಲಾಗಿದೆ.

Share News
Exit mobile version