ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆಯೇ ಮಗುಚಿ ಬಿದ್ದ ಪರಿಣಾಮ ತಂದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಆ.7 ರಂದು ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ದಿನೇಶ್ ಎಂಬುವವರು ಕೆಎ- 19-ಎಂ-8745 ನೋಂದಣಿಯ ಜೀಪು ಚಲಾಯಿಸುತ್ತಿದ್ದಾಗ ಹತ್ತದೇ ಅರ್ಧದಲ್ಲಿ ನಿಂತಿದೆ. ಆಗ ಜೀಪಲ್ಲಿ ಇದ್ದ ಅವರ ದಿನೇಶ್ ಅವರ ತಂದೆ ಧರ್ಮಪಾಲ ಅವರು ಜೀಪಿನಿಂದ ಇಳಿದು ಜೀಪ್ ನ ಹಿಂಬದಿ ರಸ್ತೆಯ ಬದಿಯಲ್ಲಿ ನಿಂತಿದ್ದರು.
ಆಗ ಧರ್ಮಪಾಲರವರ ಮಗ ದಿನೇಶನು ಜೀಪನ್ನು ಒಮ್ಮೆಗೆ ಮೇಲಕ್ಕೆ ಹತ್ತಿಸಲು ಪ್ರಯತ್ನಿಸಿದಾಗ ಜೀಪು ಮೇಲಕ್ಕೆ ಹೋಗದೇ ಒಮ್ಮೆಗೇ ಹಿಮ್ಮಖವಾಗಿ ಚಲಾಯಿಸಿದಾಗ ಜೀಪು ನಿಯಂತ್ರಣ ಕಳೆದುಕೊಂಡು ಹಿಂಬದಿ ರಸ್ತೆಯ ಬದಿಯಲ್ಲಿ ನಿಂತಿದ್ದ ಧರ್ಮಪಾಲರವರ ಮೇಲೆ ಮಗುಚಿ ಬಿದ್ದಿದೆ.
ತಕ್ಷಣ ಹತ್ತಿರದಲ್ಲೇ ಇದ್ದ ಅಲ್ಲಿಗೆ ಬಂದ ಸ್ಥಳೀಯರಾದ ನಾಗೇಶ್, ಧನಂಜಯ, ಮತ್ತು ರಮೇಶ್ ವಾಲ್ತಾಜೆ ಅವರು ಬಂದು ಜೀಪನ್ನು ಎತ್ತಿ ಧರ್ಮಪಾಲರವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಧರ್ಮಪಾಲರವರ ಮಗ ದಿನೇಶ್‌ನು ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾದಿಕಾರಿಯವರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಮತ್ತು ಕಲಂ54/2025 ಕಲಂ: 281,106 BNS-2023ಯಂತೆ ಪ್ರಕರಣ ದಾಖಲಾಗಿದೆ.