ಟೆಹ್ರಾನ್: ಸುದ್ದಿ ಓದುತ್ತಿರುವಾಗಲೇ ಇರಾನ್‌ನ ಸರ್ಕಾರಿ ಟಿವಿ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಗಾಬರಿಗೊಂಡ ನಿರೂಪಕಿ ಸ್ಥಳದಿಂದ ಓಡಿಹೋದ ವೀಡಿಯೋ ವೈರಲ್ ಆಗಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾದ ನಾಲ್ಕನೇ ದಿನ ಈ ಘಟನೆ ನಡೆದಿದೆ. ಎರಡೂ ದೇಶಗಳ ನಡುವೆ ದಾಳಿಗಳು ಹೆಚ್ಚಾಗುತ್ತಿವೆ. ಇರಾನ್ನ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ತನ್ನ ಮೇಲೆ ದಾಳಿ ಮಾಡಿದೆ ಎಂದು ಇರಾನ್‌ನ ಸರ್ಕಾರಿ ಟಿವಿ ಹೇಳಿದೆ.